ರಾಷ್ಟ್ರಮಟ್ಟಕ್ಕೆ ಸತತ 3ನೇಯ ಬಾರಿ ಆಯ್ಕೆಯಾದ ವಾಗ್ದೇವಿಯ ಆದ್ಯಾ ಎ ಹೆಚ್ Vagdevi

ರಾಷ್ಟ್ರಮಟ್ಟಕ್ಕೆ ಸತತ 3ನೇಯ ಬಾರಿ ಆಯ್ಕೆಯಾದ ವಾಗ್ದೇವಿಯ ಆದ್ಯಾ ಎ ಹೆಚ್
 
ತೀರ್ಥಹಳ್ಳಿ : ದಿನಾಂಕ 12.11.2025 ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯದ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ವಾಗ್ದೇವಿ ಆಂಗ್ಲಮಾದ್ಯಮ ಶಾಲೆಯ ಆದ್ಯಾ ಎ ಹೆಚ್ (8ನೆಯ ತರಗತಿ) ಇವಳು ಅತ್ಯುತ್ತಮವಾಗಿ ಆಟವನ್ನು ಪ್ರದರ್ಶಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಓದುತ್ತಿರುವ ಶಾಲೆಯೆ,ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ. 

ಇದರ ಜೊತೆ ಇವಳು ಸತತ ಮೂರನೇ ಬಾರಿ ರಾಷ್ಟ್ರಮಟ್ಟವನ್ನು ಪ್ರವೇಶಿಸಿರುವುದು ಸಮಸ್ತ ಜನರಲ್ಲಿ ಇನ್ನೂ ಹೆಚ್ಚಿನ ಸಂತಸವನ್ನು ಉಂಟುಮಾಡಿದೆ. ಆತ್ಯಂತ ಪ್ರತಿಭಾನ್ವಿತೆಯಾದ ಇವಳು ಎಲ್.ಕೆ.ಜಿ ಇಂದಲೂ ಚೆಸ್ ಅನ್ನು ನಿರಂತರವಾಗಿ ಕಲಿಯತ್ತಿದ್ದಾಳೆ. ಇವಳು ಶಿಕ್ಷಕ ದಂಪತಿಗಳಾದ ಸೊಪ್ಪುಗುಡ್ಡೆ ನಿವಾಸಿಗಳಾದ ಆಶಾ ಹಾಗೂ ಅನಿಲ್ ಕಮಾರ್  ದಂಪತಿಗಳ ಪುತ್ರಿಯಾಗಿದ್ದಾಳೆ. 

ರಾಷ್ಟ್ರಮಟ್ಟದ ಕ್ರೀಡೆಯು ಜನವರಿ  13 ರಂದು ಝಾರ್ಖಂಡ್ ನ ರಾಂಚಿಯಲ್ಲಿ ನಡೆಯಲಿದೆ. 
ಇವಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಸಹ ಚಿನ್ನದ್ದಪದಕವನ್ನು ಪಡುಕೊಳ್ಳಲಿ ಎಂದು ಶುಭ ಹಾರೈಸಿರುತ್ತಾರೆ.   
 



Previous Post Next Post