ಇಂದು ಎಳ್ಳಮಾವಾಸ್ಯೆ ಜಾತ್ರೆ ಕುರಿತು ಸಭೆ..!
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಸಂಬಂಧಿಸಿದಂತೆ ಇಂದು ಸಂಜೆ 4-30ಕ್ಕೆ ಪಟ್ಟಣದ ಶಾಂತವೇರಿ ಗೋಪಾಲಗೌಡ
ರಂಗಮಂದಿರದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ತಾಲೂಕು ದಂಡಾಧಿಕಾರಿ ರಂಜಿತ್ ಇವರ ಅಧ್ಯಕ್ಷತೆಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಸಭೆ ನಿಗದಿ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲಿ ಅತ್ಯಂತ ವೈಭವದಿಂದ ಆಚರಿಸುವ ಈ ಒಂದು ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕಿದೆ. ಇತ್ತೀಚಿಗೆ ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಬೆರೆಸುತ್ತಿದ್ದೂ ರಾಜಕೀಯದಿಂದ ಕಾರ್ಯಕ್ರಮಕ್ಕೆ ಮೆರಗು ಸಿಗದ ಹಾಗೆ ಆಗಿದೆ ಎಂಬ ಮಾತು ಇತ್ತೀಚಿಗೆ ನಡೆದ ದಸರಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಹಾಗಾಗಿ ಇಂದು ನಡೆಯುವ ಜಾತ್ರೆ ಸಭೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಇಷ್ಟು ವರ್ಷಗಳ ಕಾಲ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರು ನಿಭಾಯಿಸುತ್ತಿದ್ದರು. ಈ ಬಾರಿ ಸಹ ಅವರನ್ನೇ ಸಂಚಾಲಕರನ್ನಾಗಿ ಮಾಡಬೇಕು ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ. ಹಲವು ಸಂಘ ಸಂಸ್ಥೆ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಗೂ ಪ್ರತಿಯೊರ್ವ ರಾಜಕಾರಣಿ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ಸೊಪ್ಪುಗುಡ್ಡೆ ರಾಘವೇಂದ್ರ ಅವರು ತೆಪ್ಪೋತ್ಸವ ಸಮಿತಿ ಸಂಚಾಲರಾಗುವುದು ಸೂಕ್ತ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಈ ಬಾರಿ ಜಾತ್ರೆ ಹಾಗೂ ತೆಪ್ಪೋತ್ಸವ ಬಾರಿ ಬೇಗ ಬರುತ್ತಿದ್ದು ಡಿ. 19 ರಿಂದ ಆರಂಭವಾಗಲಿದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡದೇ ಧಾರ್ಮಿಕ ಕಾರ್ಯಕ್ರಮವನ್ನು ಸುಂದರವಾಗಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ..
Tags:
ಜಾತ್ರೆ ಸುದ್ದಿ