ಬಾಳೆಬೈಲು ಸಿದ್ದೇಶ್ವರ ಬೆಟ್ಟದ ದೀಪೋತ್ಸವಕ್ಕೆ ಅದ್ದೂರಿ ತೆರೆ!
ದೀಪೋತ್ಸವದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಭಾಗಿ
ತೀರ್ಥಹಳ್ಳಿ : ಪ್ರಸಿದ್ಧ ಐತಿಹಾಸಿಕ ದೇಗುಲವಾದ ಬಾಳೆಬೈಲು ಸಿದ್ದೇಶ್ವರ ಬೆಟ್ಟದಲ್ಲಿ ಶನಿವಾರ ನಡೆದ ದೀಪೋತ್ಸವದಲ್ಲಿ ಸಾವಿರಾರು ಭಕ್ತರ ಭಕ್ತಿಯ ಸಮಾಗಮಕ್ಕೆ ಸಾಕ್ಷಿಯಾಯಿತು. ಅದರಂತೆ ಅದ್ದೂರಿ ದೀಪೋತ್ಸವಕ್ಕೆ ಅದ್ದೂರಿ ತೆರೆ ಬಿತ್ತು.
ಸುಮಾರು 1000 ಅಡಿ ಬೆಟ್ಟದ ಮೇಲಿರುವ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿ ಸಿದ್ದೇಶ್ವರನ ದರ್ಶನ ಪಡೆದು ದೀಪವನ್ನು ಹಚ್ಚಿ ಅನ್ನ ಪ್ರಸಾದ ಸ್ವೀಕರಿಸಿ ಪಾವನರಾದರು. ನೂರಾರು ಕುಟುಂಬಗಳು ಆಗಮಿಸಿ ದೇವಸ್ಥಾನದ ಹಿಂಭಾಗಲ್ಲಿ ಕಲ್ಲಿನ ಮನೆ ಕಟ್ಟಿ ತಮ್ಮ ಹರಕೆ ಬೇಡಿಕೊಂಡರು. ಚಂಡೆ, ಜೊತೆಗೆ ಸಿದ್ದಿಮದ್ದಿನ ಜೇಂಕಾರದ ಜೊತೆಗೆ ವರ್ಣ ರಂಜಿತ ತೆರೆ ಬಿತ್ತು.
ಬೆಟ್ಟದ ಮೇಲೆ ಪ್ರಕೃತಿ ನಡುವಲ್ಲಿ ನಡೆದ ಈ ದೀಪೋತ್ಸವಕ್ಕೂ ಮುನ್ನ ಸ್ವಾಮಿಗೆ ರುದ್ರಾಭಿಷೇಕ ಪೂಜೆ ನೆರವೇರಿತು. ಭಕ್ತರು ಸಂಗೀತ ಗಾಯನ ಮಾಡಿ ದೇವರಿಗೆ ಭಕ್ತಿ ಅರ್ಪಿಸಿದರು. ಬೆಟ್ಟ ಹತ್ತಲು ಭಕ್ತರು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು. ಆದರೂ ಸಹ ಐದು ಸಾವಿರಕ್ಕೂ ಅಧಿಕ ಮಂದಿ ಈ ದೀಪೋತ್ಸವದಲ್ಲಿ ಭಾಗಿಯಾಗಿದ್ದರು.
ಅಚ್ಚುಕಟ್ಟಿನ ಆಯೋಜನೆ !
ಬಾಳೆಬೈಲು ಸಿದ್ದೇಶ್ವರ ಸ್ವಾಮಿ ಸಮಿತಿಯವರು ಅತ್ಯಂತ ಅಚ್ಚುಕಟ್ಟಿನಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಸಲುವಾಗಿ ಕಳೆದ ಒಂದು ವಾರದಿಂದ ಪ್ರತಿಯೊಂದು ಸಾಮಗ್ರಿಗಳನ್ನು ಗುಡ್ಡದ ಮೇಲೆ ಸಾಗಿಸಿ ಕಾರ್ಯಕ್ರಮ ನಡೆಸಿದ ರೀತಿ ಪ್ರತಿಯೊಬ್ಬರ ಗಮನ ಸೆಳೆಯಿತು. ವಿದ್ಯುತ್ ಅಲಂಕಾರ, ದೇವಸ್ಥಾನದ ಪೂಜೆ, ಅನ್ನಸಂತರ್ಪಣೆ ಎಲ್ಲವೂ ಗಮನ ಸೆಳೆಯಿತು.
Tags:
ದೀಪೋತ್ಸವ