ವಿಶ್ವಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟದ ಭಾರತ ತಂಡಕ್ಕೆ ಕರ್ನಾಟಕದ ಏಕೈಕ ಸ್ಪರ್ಧಿಯಾಗಿ ಒಂಬತ್ತನೇ ತರಗತಿಯ ಶಗುನ್ ಎಸ್ ವರ್ಮ ಆಯ್ಕೆ Christ kimg

ವಿಶ್ವಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟದ ಭಾರತ ತಂಡಕ್ಕೆ  ಕರ್ನಾಟಕದ ಏಕೈಕ ಸ್ಪರ್ಧಿಯಾಗಿ ಒಂಬತ್ತನೇ ತರಗತಿಯ ಶಗುನ್ ಎಸ್ ವರ್ಮ ಆಯ್ಕೆ

ಕಾರ್ಕಳ:  ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15 ರ ವಯೋಮಿತಿಯ ವಿಶ್ವಾಶಾಲಾ ಬಾಲಕಿಯರ ವಿಭಾಗದ ವಿಶ್ವವಾಲಿಬಾಲ್ ಪಂದ್ಯಾಟದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾಳೆ. 

ಇವಳು 15 ರ ವಯೋಮಿತಿಯ ಭಾರತೀಯ ವಾಲಿವಾಲ್ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಆಟಗಾರ್ತಿ.  ಅಂತರಾಷ್ಟ್ರೀಯ ಪಂದ್ಯವು ಇದೇ ಡಿಸೆಂಬರ್ ತಿಂಗಳ 4ರಿಂದ 13 ನೇ ತಾರೀಖಿನವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದ್ದು ಭಾರತ ತಂಡವನ್ನು ಪ್ರತಿನಿಧಿಸುವ ಕಾರ್ಕಳ ಹೆಮ್ಮೆಯ ಕ್ರೀಡಾಪಟುವಾಗಿದ್ದಾಳೆ.

ಶಗುನ್ ಎಸ್ ವರ್ಮ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರುತಿರಾಜ್ ದಂಪತಿಗಳ ಸುಪುತ್ರಿಯಾಗಿದ್ದಾಳೆ. 
Previous Post Next Post