ನ.17ರಂದು ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣೆಮತ್ತು ಧಾರ್ಮಿಕ ಸೇವಾ ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ- ಏನೆಲ್ಲಾ ಇರುತ್ತೆ..!? tth

ನ.17ರಂದು ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣೆ ಮತ್ತು ಧಾರ್ಮಿಕ ಸೇವಾ ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ- ಏನೆಲ್ಲಾ ಇರುತ್ತೆ..!?

ತೀರ್ಥಹಳ್ಳಿ: ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ (ರಿ) ತೀರ್ಥಹಳ್ಳಿ ವತಿಯಿಂದ ನವಂಬರ್ 17ರ ಸೋಮವಾರದಂದು ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ರಾಮೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ನಿತ್ಯ ಅನ್ನಸಂರ್ಪಣಾ ಸೇವಾ ಸಮಿತಿಯು 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥ ಹಾಗೂ ಭಕ್ತ ಜನರ ಶ್ರೇಯೋಭಿವೃದ್ಧಿಗಾಗಿ ನವಗ್ರಹಪೂರ್ವಕ ಶನಿಶಾಂತಿ ಸಹಿತ ಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಮಹಾವಿಷ್ಣು ಮಂತ್ರ ಹೋಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯವರು ತಿಳಿಸಿದರು.

*ರೋಗಬಾಧೆ ನಿವಾರಣೆ ಹಾಗೂ ಕುಟುಂಬ ಆರೋಗ್ಯ
ಪ್ರಾಪ್ತಿಗಾಗಿ ಧನ್ವಂತರಿ ಹೋಮ
* ಅಪಮೃತ್ಯು ಕಂಟಕದೋಷ, ಮೃತ್ಯಬಾಧೆ, ಭಯ
ನಿವಾರಣೆ ಹಾಗೂ ಆಯುಷ್ಯ ಆರೋಗ್ಯ ವೃದ್ಧಿಗಾಗಿ ಮಹಾ
ಮೃತ್ಯಂಜಯ ಹೋಮ
*ಗ್ರಹದೋಷದಿಂದ ಬದುಕಿನಲ್ಲಿ ಬರುವಂತಹ ಕಷ್ಟ
ಕಾರ್ಪಣ್ಯ್ರಗಳು, ಬಾಧೆಗಳು, ರೋಗ, ಭಯ ದೋಷಗಳ
ನಿವಾರಣೆ ಹಾಗೂ ಕುಟುಂಬದ ಶಾಂತಿ ನೆಮ್ಮದಿ ಪ್ರಾಪ್ತಿಗಾಗಿ
ನವಗ್ರಹ ಶಾಂತಿ ಹೋಮ.
*ಪಂಚಮ ಶನಿದೋಷ ಬಾಧೆಗಳ ನಿವಾರಣೆ, ಅಷ್ಟಮ ಶನಿದೋಷದ ಗ್ರಹಚಾರ ನಿವಾರಣೆ, ಮನುಷ್ಯನಲ್ಲಿ ಬಾಧಿಸುವ ಸಾಡೆಸಾತ್ ಕಷ್ಟಗಳು, ದೋಷದ ನಿವಾರಣೆಗಾಗಿ ಶನಿ ಶಾಂತಿ..

ಈ ಮೇಲ್ಕಂಡ ದೋಷ ನಿವಾರಣೆ ಮಾಡಿಸಿದ
ಭಕ್ತಾದಿಗಳು ಅನ್ನದಾನ ಸೇವೆ ಅಥವಾ ಅಕ್ಕಿದಾನ
ಮಾಡುವುದು ಶ್ರೇಷ್ಠವಾಗಿರುತ್ತದೆ.

ಈ ಎಲ್ಲಾ ಸೇವಾ ಕಾರ್ಯಗಳನ್ನು ತಾವುಗಳು ಮಾಡಿಸಿ
ಶ್ರೀ ಸ್ವಾಮಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ
ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ನಿತ್ಯ ಅನ್ನಸಂತರ್ಪಣೆ
ಮತ್ತು ಧಾರ್ಮಿಕ ಸೇವಾ ಸಮಿತಿಯವರು ವಿನಂತಿಸಿದ್ದಾರೆ.


ಸೇವಾ ವಿವರ
ಧನ್ವಂತರಿ ಹೋಮ-301 ರೂ
ಮೃತ್ಯುಂಜಯ ಹೋಮ-301ರೂ
ನವಗ್ರಹ ಶಾಂತಿಹೋಮ-201ರೂ
ಶನಿ ಶಾಂತಿ-201ರೂ.
ಕಾರ್ತಿಕ ಮಾಸದ ವಿಶೇಷ ಅನ್ನದಾನ, ರುದ್ರಾಭಿಷೇಕ
ಸಹಿತ ಸರ್ವ ಸೇವೆ-3001ರೂ.

.



Previous Post Next Post