ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ tth

ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ 
ತೀರ್ಥಹಳ್ಳಿ: ವೆಂಕಟೇಶ್ವರ ಚಿತ್ರಮಂದಿರದಲ್ಲಿ ‘ಕಾಂತರಾ’ ಚಿತ್ರದ ಟಿಕೆಟ್ ವಿತರಣೆ ವೇಳೆ ಗೊಂದಲ ಸೃಷ್ಟಿಯಾಗಿದೆ. ನೂರಾರು ಮಂದಿ ಅಭಿಮಾನಿಗಳು ಟಿಕೆಟ್ ಪಡೆಯಲು ಬೆಳಗ್ಗೆಯಿಂದಲೇ ಚಿತ್ರಮಂದಿರದ ಹೊರಗೆ ಸಾಲಿನಲ್ಲಿ ನಿಂತಿದ್ದರು.

ಮಹಿಳೆಯರಿಗಾಗಿ ತೆರೆಯಬೇಕಿದ್ದ ಕೌಂಟರ್ 9:30ರವರೆಗೂ ಆರಂಭವಾಗದ ಕಾರಣ, ಸಿನಿಮಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು. ಟಿಕೆಟ್ ವಿತರಣೆ ನಿಧಾನಗತಿಯಲ್ಲಿ ನಡೆದ ಹಿನ್ನೆಲೆ, ಸ್ಥಳದಲ್ಲಿ ಜನಸಮೂಹ ಹೆಚ್ಚಾಗಿ ಒತ್ತಡ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಸ್ಥಿತಿ ಇದೀಗ ನಿಯಂತ್ರಣದಲ್ಲಿದೆ
Previous Post Next Post