ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳು - ಎರಡನೇ ವಾರಕ್ಕೆ ಶೋ ಬಂದ್..!?
ಜಾಲಿವುಡ್ ಸ್ಟೂಡಿಯೋಸ್ನಿಂದ ಬಿಗ್ ಬಾಸ್ ಮನೆಯನ್ನು ಕಾನೂನಿನ ನಿಯಮಗಳನ್ನು ಮೀರಿ ನಡೆಸುತ್ತಿದ್ದರಿಂದ ರಾಜ್ಯ ಸರ್ಕಾರದಿಂದ ಇದೀಗ ಮನೆಯನ್ನು ಕ್ಲೋಸ್ ಮಾಡಿಸಲಾಗಿದೆ. ಇದೀಗ ಎಲ್ಲ ಸ್ಪರ್ಧಿಗಳನ್ನು ಸಂಜೆ 7 ಗಂಟೆಯೊಳಗೆ ಹೊರಗೆ ಕಳಿಸುವಂತ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲಿಯೇ ಹಿಂಬದಿ ಗೇಟಿನಿಂದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಪೊಲೀಸರು ಬಿಗ್ ಬಾಸ್ ಮನೆಯೊಳಗೆ ಹೋಗುವ ವೇಳೆಗೆ ಎಲ್ಲ ಸ್ಪರ್ಧಿಗಳನ್ನು ಈ ಆವರಣದಲ್ಲಿ ಕೂಡಿ ಹಾಕಲಾಗಿತ್ತು.
ಎಲ್ಲ ಸ್ಪರ್ಧಿಗಳನ್ನು ಕೂಡಲೇ ಮನೆಯಿಮದ ಹೊರಗೆ ಕಳುಹಿಸಿ, ಲೈಟ್ಸ್ ಆಫ್ ಮಾಡಲಾಗುತ್ತು. ಎಲ್ಲ 3 ಗೇಟುಗಳನ್ನು ರಾಮನಗರದ ತತಹಶೀಲ್ದಾರ್ ನೇತೃತ್ವದಲ್ಲಿ ಕ್ಲೋಸ್ ಮಾಡಲಾಗಿದೆ. ಇನ್ನು ಒಂದು ಗೇಟ್ ಮಾತ್ರ ಬಾಕಿಯಿದೆ. ಈಗ ಎಲ್ಲ 17 ಸ್ಪರ್ಧಿಗಳು ಇದೀಗ ಕಿಚ್ಚ ಸುದೀಪ್ ವಾರಾಂತ್ಯದ ಕಾರ್ಯಕ್ರಮವನ್ನ ನಡೆಸಿಕೊಡುವ ಜಾಲಿವುಡ್ ಥಿಯೇಟರ್ ಆವರಣಕ್ಕೆ ಕರೆತಂದು ಕೂರಿಸಲಾಗಿದೆ.
ಘಟನೆಯ ಹಿನ್ನೆಲೆಯೇನು?
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ, 'ಬಿಗ್ ಬಾಸ್ ಕನ್ನಡ ಸೀಸನ್ 12' ರ ರಿಯಾಲಿಟಿ ಶೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 7 ಗಂಟೆಯೊಳಗೆ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುವಂತೆ ಸೂಚನೆ ನೀಡಲಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಟುಡಿಯೋಗೆ ಆಗಮಿಸಿದ್ದು, ಸಂಜೆ 7 ಗಂಟೆಯೊಳಗೆ ಎಲ್ಲ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲು ಸೂಚನೆ ನೀಡಿದ್ದರು.
ಇನ್ನು ಮುಂದೆ ಬಿಗ್ ಬಾಸ್ ನಡೆಯುತ್ತಾ? ಕಾದು ನೋಡಬೇಕಿದೆ
Tags:
ಬಿಗ್ ಬಾಸ್