ಚತುರ ಪ್ರಕಾಶ್ ನಿಧನ tth

ಚತುರ ಪ್ರಕಾಶ್ ನಿಧನ
ತೀರ್ಥಹಳ್ಳಿ: ಪಟ್ಟಣದ ಕೆಸಿ ರಸ್ತೆ ನಿವಾಸಿ ಚತುರ ಪ್ರಕಾಶ್ (61 ವರ್ಷ) ಇಂದು ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಇವರು ತಾಲೂಕು ಕಚೇರಿಯ ಮುಂಭಾಗ ಎಸ್‌.ಬಿ.ಐ ಬ್ಯಾಂಕಿನ ಕೆಳಗಿನ ಅಂತಸ್ತಿನ ಕೊಠಡಿಯೊಂದರಲ್ಲಿ ಜೆರಾಕ್ಸ್ ಅಂಗಡಿ ಹಾಗೂ ಬಸ್ ಬುಕ್ಕಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಅನೇಕ ದಶಕಗಳಿಂದ ಬಸ್ ಬುಕ್ಕಿಂಗ್ ಮಾಡುತ್ತಾ ಹಬ್ಬ-  ಹರಿದಿನಗಳಲ್ಲಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ವಿಶೇಷ ವಾಹನಗಳ ವ್ಯವಸ್ಥೆ ಕೂಡ ಮಾಡುತ್ತಿದ್ದರು. ಹೀಗೆ ಬಸ್ ಬುಕ್ಕಿಂಗ್‌ನಲ್ಲಿ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದರು.

ಇವರು ತಾಲೂಕಿನ ಜನರು ಯಾವುದಾದರೂ ಸಮಯದಲ್ಲಿ ಬೆಂಗಳೂರಿಗೆ ಹೋಗಲು ಕರೆ ಮಾಡಿದರೇ ಅಲ್ಲಗಳೆಯದೇ ವ್ಯವಸ್ಥೆ ಮಾಡಿ ಕೊಡುತ್ತಿದ್ದರು. ಎರಡು ಮೂರು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಮನೆಯಲ್ಲಿಯೇ ದಿಢೀರ್ ಕುಸಿದು ಬಿದ್ದು ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
Previous Post Next Post