ಹದಿನೆಂಟರ ನಂಟು - ಕಾಂಗ್ರೆಸ್ ಗೆ ಕಗ್ಗಂಟು..!
ತೀರ್ಥಹಳ್ಳಿ : ತಾಲೂಕು ಕಾಂಗ್ರೆಸ್ ಪಕ್ಷಕ್ಕೆ ಹದಿನೆಂಟು ಎಂಬುದು ಕಗ್ಗಂಟಾಗಿ ಇರುವಂತೆ ಕಾಣಿಸುತ್ತಿದೆ. ಪಟ್ಟಣ ಪಂಚಾಯತ್ ವಿಚಾರದಲ್ಲಿ ಹದಿನೆಂಟು ಎಂಬುದು ಬಾರಿ ಮಹತ್ವ ಪಡೆದಿದ್ದು ಕಗ್ಗಂಟು ಆಗಿರುವ ಪರಿಸ್ಥಿತಿಯನ್ನು ಸರಿಪಡಿಸುತ್ತಾರ ಅಥವಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುತ್ತದ ಎಂಬುದು ಬಾರಿ ಕುತೂಹಲ ಮೂಡಿಸಿದೆ..
ಪಟ್ಟಣ ಪಂಚಾಯತ್ ಅಧ್ಯಕ್ಷರ ವಿಷಯದಲ್ಲಿ ಸ್ವಲ್ಪ ಸಮಾಧಾನದಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದ ಪಕ್ಷವು ಸ್ವಲ್ಪ ಮಟ್ಟಿಗೆ ಎಡವಿತೇನೋ? ಎಂಬ ಮಾತು ಕೇಳಿ ಬಂದರೂ ತಮ್ಮ ನಿರ್ಧಾರವನ್ನು ಅಧ್ಯಕ್ಷರು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಪಕ್ಷದ ಹೇಳಿಕೆ ಆಗಿದೆ. ಈಗಾಗಲೇ 18 ಕ್ಕೆ ಅವಿಶ್ವಾಸ ನಿರ್ಣಯ ಸಭೆ ಇದ್ದು ಆ ಸಭೆಯಲ್ಲಿ ಏನಾಗಲಿದೆ ಎಂಬುದು ಬಾರಿ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದೊಳಗೆ ಒಡಕು - ಬಿಜೆಪಿಗೆ ಸಿಗುತ್ತಾ ಮಿಲ್ಕು..!?
ಕಾಂಗ್ರೆಸ್ ಪಕ್ಷದೊಳಗೆ ಆಗಿರುವ ಈ ಭಿನ್ನಮತದಿಂದ ಬಿಜೆಪಿ ಪಕ್ಷಕ್ಕೆ ಬಾರಿ ಖುಷಿ ಕೊಟ್ಟಿದ್ದು ಒಂದು ವೇಳೆ ಏನಾದರು ಎಡವಟ್ಟು ಆಗಿ ಬಿಜೆಪಿ ಪಕ್ಷಕ್ಕೆ ಆಡಳಿತ ಚುಕ್ಕಾಣಿ ಸಿಗಬಹುದೇನೋ ಎಂಬ ಅನುಮಾನ ಸೃಷ್ಟಿ ಆಗಿದೆ.
ಈಗಾಗಲೇ ಪಕ್ಷದೊಳಗೆ ಸ್ವಲ್ಪ ಗೊಂದಲ ಇದ್ದು ಸಭೆಯಲ್ಲಿ
ಅವಿಶ್ವಾಸ ಆದರೆ ಅಥವಾ ಚುನಾವಣೆ ನಡೆದ ಸಂದರ್ಭದಲ್ಲಿ ಏನಾದರೂ ಸ್ವಲ್ಪ ಎಡವಟ್ಟು ಆದರೂ ಸಹ ಬಿಜೆಪಿ ಪಕ್ಷಕ್ಕೆ ಅಧಿಕಾರ ಸಿಗುವ ಸಾಧ್ಯತೆ ಇದೆ. ಹಾಗಾಗಿ ಪಟ್ಟಣ ಪಂಚಾಯತ್ ಬಗ್ಗೆ ತಿಳಿದುಕೊಂಡ ಕೆಲವರು ಬಿಜೆಪಿ ಪಕ್ಷಕ್ಕೆ ಗದ್ದುಗೆ ಏರಿ ಹಾಲು ಕುಡಿಯುವ ಅವಕಾಶ ಇದ್ದು ಹಾಗಾದರೆ
ಕಾಂಗ್ರೆಸ್ ಪಕ್ಷದೊಳಗಿನ ಒಡಕು - ಬಿಜೆಪಿಗೆ ಮಿಲ್ಕು ಎಂದು ಹಾಸ್ಯವಾಗಿ ಮಾತನಾಡುತ್ತಿದ್ದಾರೆ.
ಒಟ್ಟಿನಲ್ಲಿ ಅಕ್ಟೋಬರ್ 18 ರಂದು ನಡೆಯುವ ಅವಿಶ್ವಾಸ ನಡೆಯುವ ವೇಳೆ ಡ್ರಾಮಾ ಅಷ್ಟೇ ಅಲ್ಲದೆ ಹೈಡ್ರಾಮಾ ನಡೆಯುವ ಎಲ್ಲಾ ಸಾಧ್ಯತೆ ಕೂಡ ಇದೆ...
Tags:
ಪಟ್ಟಣ ಪಂಚಾಯತ್