ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರೋತ್ಸವ - ಏನೆಲ್ಲಾ ಪೂಜೆ ಇರುತ್ತೆ..!?
ತೀರ್ಥಹಳ್ಳಿ: ಜೀವ ಜಗತ್ತಿನ ಪ್ರಸಾವಿತ್ರೀ, ಆಸುರೀ ಶಕ್ತಿಯನ್ನು ದಮನಗೊಳಿಸಿದ ಲೋಕಸಮುದ್ಧಾರಿಣೀ; ಅರಿವಿನ ಬೆಳಕನ್ನು ಕರುಣಿಸುವ ಜ್ಞಾನವಿಜ್ಞಾನಸಂಧಾತ್ರೀ; ಸಂಪದನುಗ್ರಹಿಸುವ ಶುಭಲಕ್ಷಣ ಲಕ್ಷಿತಾಂಗೀ; ಜಗಚಕ್ರ ಪರಿವರ್ತಿನಿ..ಎನಿಸಿದ ಜಗನ್ಮಾತೆಯ ಆರಾಧನೆಗೆ ಒದಗಿದ ಕಾಲ ವಿಶೇಷವೇ ನವರಾತ್ರಿ ಪರ್ವ.
ಈ ನವರಾತ್ರಿ ಅಂಗವಾಗಿ ಕ್ಷೇತ್ರದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶ್ವಾವಸು ಸಂವತ್ಸರದ ಆಶ್ವಯುಜ ಶುಕ್ಲ ಪಾಡ್ಯದಿಂದ ಆಶ್ವಯುಜ ಶುಕ್ಲ ದಶಮೀ ಪರ್ಯಂತ ನವರಾತ್ರೋತ್ಸವ ಒಂಭತ್ತು ದಿನಗಳ ಪರ್ಯಂತ ವಿಶೇಷ ಪೂಜೆ ನಡೆಯಲಿದೆ. ದಿನಾಂಕ 22.09.2025 ರಿಂದ 02.10.2025ವರೆಗೆ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಪ್ರತಿ ದಿನ ಸಂಜೆ 5.30 ರಿಂದ ದುರ್ಗಾ ಪಾರಾಯಣ ದುರ್ಗಾಪೂಜೆ, ಕುಂಕುಮಾರ್ಚನೆ, ಬೆಳಿಗ್ಗೆ ಪಂಚಾಮೃತ ಅಭೀಷೇಕ, ರುದ್ರಾಭೀಷೇಕ, ಮೊದಲಾದ ಉಪಚಾರಗಳಿಂದ ದೇವತಾ ಕಾರ್ಯ ನಡೆಯಲಿದೆ. ದಿನಾಂಕ 2.10.2025ರ ವಿಜಯದಶಮಿಯಂದು ಬೆಳಿಗ್ಗೆ ದುರ್ಗಾಹೋಮ ಸಂಪನ್ನಗೊಳ್ಳಲಿದೆ. ಭಗವದ್ಭಕ್ತರು ಈ ವಿಶೇಷ ದೇವ್ಯುತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸೇವೆಗಳು ಏನು ಇರುತ್ತೆ..!?
* ಒಂಬತ್ತು ದಿನದ ನವರಾತ್ರಿ ದುರ್ಗಾ ಪಾರಾಯಣ, ಆರ್ಚನೆ, ರುದ್ರಾಭೀಷೇಕ ಇತ್ಯಾದಿ.
* ಒಂದು ದಿನದ ನವರಾತ್ರಿ ದುರ್ಗಾ ಪಾರಾಯಣ,ಅರ್ಚನೆ, ರುದ್ರಾಭೀಷೇಕ ಇತ್ಯಾದಿ.
* ವಿಜಯದಶಮಿಯಂದು ದುರ್ಗಾಹೋಮ. ಈ ಎಲ್ಲಾ ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಮುಂಚಿತವಾಗಿ ದೇವಸ್ಥಾನದ ಅರ್ಚಕರಲ್ಲಿ ಹೆಸರು ನೋಂದಾಯಿಸಲು ಕೋರಿದೆ.
ಸಂಪರ್ಕಿಸಿ: 9986298818
Tags:
ಧಾರ್ಮಿಕ ಸುದ್ದಿ