ಡಿಜೆ ಬಳಕೆ ವಿರುದ್ಧ ದಾಖಲಾಯ್ತು ದೂರುಗಳು - ಎಲ್ಲೆಲ್ಲಿ ಪ್ರಕರಣ ದಾಖಲು..!? Dj

ಡಿಜೆ ಬಳಕೆ ವಿರುದ್ಧ ದಾಖಲಾಯ್ತು ದೂರುಗಳು - ಎಲ್ಲೆಲ್ಲಿ ಪ್ರಕರಣ ದಾಖಲು..!?

ತೀರ್ಥಹಳ್ಳಿಯಲ್ಲೂ ದಾಖಲಾಯ್ತು ಪ್ರಕರಣ..!


ಶಿವಮೊಗ್ಗ : ಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಬಳಕೆಯಾದ ಡಿಜೆ ವಿರುದ್ಧವಾಗಿ ಜಿಲ್ಲೆಯಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿರುವುದಾಗಿ ಈಗಾಗಲೇ ಪೊಲೀಸ್ ಇಲಾಖೆ ತಿಳಿಸಿದೆ. ಅವುಗಳಲ್ಲಿ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿರುವ  ಎಫ್ಐಆರ್ ಗಳು ಲಭ್ಯವಾಗಿದೆ. 

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.6 ರಂದು ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ  ಡಿಜೆ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿರುವುದರಿಂದ ಹಿಂದೂ ಕೇಸರಿ ಅಲಂಕಾರ ಸಮಿತಿಯ ಸಮರ್ಪಣಾ ಅಸೋಸಿಯೇಷನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಅದರಂತೆ ದುರ್ಗಿಗುಡಿಯಲ್ಲಿ ಗಣಪತಿ ಹಾರ ಹಾಕಲು ಸಹನಾ ಸೆಲೂಲರ್ಸ್ ನಿಂದ ಡಿಜೆ ಬಳಕೆ, ಜೈಲ್ ಸರ್ಕಲ್ ನಲ್ಲಿ ಗೆಳೆಯರ ಆಟೋ ನಿಲ್ದಾಣದ ಗೆಳೆಯರ ಬಳಗ ಮತ್ತು ಡಿಜೆ ಮಾಲೀಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈದ್ ಮೆರವಣಿಗೆಯಲ್ಲಿ ಡಿಜೆ ಬಳಸಲಾಗಿದೆ ಎಂದು ರಾಗಿಗುಡ್ಡದ ನೂರ್ ಮಸೀದಿ ಅಧ್ಯಕ್ಷರು ಮತ್ತು ಟ್ರ್ಯಾಕ್ಟರ್ ವಿರುದ್ಧ, ಮದಾರಿಪಾಳ್ಯದಲ್ಲಿ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ 6 ಡಿಜೆ ಬಾಕ್ಸ್ ಮತ್ತು 8 ಲೇಜರ್ ಲೈಟ್ ಬಳಸಿ ಜಿಲ್ಲಾಧಿಕಾರಿಗಳ ಆದೇಶವನ್ನ ಉಲ್ಲಂಘಿಸಿದ ಕಾರಣದಿಂದ ತುಂಗಾ ನಗರದಲ್ಲಿ ದೂರು ದಾಖಲಾಗಿದೆ. 

ಜೆಪಿ ನಗರದಲ್ಲಿ ಮಿಲಾದ್ ಮೆರವಣಿಗೆ ನೇತೃತ್ವವನ್ನ ವಹಿಸಿಕೊಂಡವರ ವಿರುದ್ಧ, ಸೂಳೆಬೈಲಿನಲ್ಲಿ ಮೆರವಣಿಗೆಯ ಅಧ್ಯಕ್ಷತೆ ವಹಿಸಿದ್ದವರು ಮತ್ತು ಡಿಜೆ ಮಾಲೀಕರ ವಿರುದ್ಧ, ರಾಜೀವ್ ಗಾಂಧಿ ಬಡಾವಣೆಯಲ್ಲಿ ಈದ್ ಮಿಲಾದ್ ಮೆರವಣಿಗೆಯ ಆಯೋಜಕರ ಮತ್ತು ಇತರರ ವಿರುದ್ಧ, ಬಾಪೂಜಿ ನಗರದ 7 ನೇ ತಿರುವಿನಲ್ಲಿ ಈದ್ ಮಿಲಾದ್ ಮೆರವಣಿಗೆಯ ನೇತೃತ್ವ ವಹಿಸಿಕೊಂಡವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ ಎಫ್ಐಆರ್ ದಾಖಲಾಗುತ್ತಿದ್ದು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

ತೀರ್ಥಹಳ್ಳಿಯಲ್ಲೂ ಡಿಜೆ ಬಳಕೆ ವಿರುದ್ಧ ಪ್ರಕರಣ ದಾಖಲು..!

ತೀರ್ಥಹಳ್ಳಿ ತಾಲೂಕಿನಲ್ಲೂ ನಾಲ್ಕು ಸಂಘ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಾಗಿದೆ. ಡಿಜೆ ಬಳಕೆ ಲೇಸರ್ ಲೈಟ್ ಬಳಕೆ ಹಾಗೂ ಆದೇಶಗಳ ಉಲ್ಲಂಘನೆ ವಿರುದ್ಧವಾಗಿ ಹಿಲಿಕೆರೆ, ಕೋಣಂದೂರಿನ ಎರಡು ಹಾಗೂ ಬೊಮ್ಮಸಯ್ಯನ ಅಗ್ರಹಾರದ ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಕೆ ವಿರುದ್ಧ ಆಯೋಜಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.





Previous Post Next Post