ಶಿವಮೊಗ್ಗ ದಸರಾಗೆ ಈ ಬಾರಿ ಯಾರೆಲ್ಲ ಬರ್ತಿದ್ದಾರೆ? Dasara

ಶಿವಮೊಗ್ಗ ದಸರಾಗೆ ಈ ಬಾರಿ ಯಾರೆಲ್ಲ ಬರ್ತಿದ್ದಾರೆ? 



ಶಿವಮೊಗ್ಗ: ಚಲನಚಿತ್ರ ದಸರಾದಲ್ಲಿ ಈ ಬಾರಿ ಮೂರು ಸಿನಿಮಾಗಳು ಪ್ರದರ್ಶನವಾಗಲಿವೆ. ನಗರದ ಎರಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.
ಸೆ.25ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಸಿನಿಮಾ ಪ್ರದರ್ಶನವಾಗಲಿದೆ. ಸೆ.26ರಂದು ಬೆಳಗ್ಗೆ 9.30ಕ್ಕೆ ಜೀನಿಯಸ್‌ ಮುತ್ತ, ಸೆ.27ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಪ್ರದರ್ಶನವಾಗಲಿದೆ.

ಇನ್ನು, ಶಿವಮೊಗ್ಗ ದಸರಾದಲ್ಲಿ ಈ ಬಾರಿ ಚಿತ್ರರಂಗದ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಸೆ.24ರಂದು ಚಲನಚಿತ್ರ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ಶರಣ್‌, ನಟಿ ಕಾರುಣ್ಯ ರಾಮ್‌ ಭಾಗವಹಿಸಲಿದ್ದಾರೆ. ಅದೇ ದಿನ ನಿರ್ದೇಶಕ ಸಾಯಿ ಪ್ರಕಾಶ್‌, ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಕೂಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆ.26ರಂದು ನಗೆ ಹಬ್ಬದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಪಾಲ್ಗೊಳ್ಳಲಿದ್ದಾರೆ. ಸೆ.28ರಂದು ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕುಮಾರ್‌ ಭಾಗವಹಿಸಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಹೇಮಂತ್‌ ಕುಮಾರ್‌, ಅನುರಾಧ ಭಟ್‌, ಸರಿಗಮಪ , ಗಿಚ್ಚಿಗಿಲಿಗಿಲಿ  ಕಾರ್ಯಕ್ರಮದ ಕಲಾವಿದರು ಭಾಗವಹಿಸಲಿದ್ದಾರೆ. ಅ.1ರಂದು ನಟಿ ಹರ್ಷಿಕಾ ಪೂಣಚ್ಚ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.







Previous Post Next Post