ಇಂದು ಸಂಜೆ ಮಾಧವ ದೇವಸ್ಥಾನದಲ್ಲಿ ತುಳಸಿ ಅರ್ಚನೆ..!
ತೀರ್ಥಹಳ್ಳಿ : ರಥಬೀದಿಯಲ್ಲಿರುವ ರಾಮೇಶ್ವರ ದೇವಸ್ಥಾನದ ಪಕ್ಕದ ಶ್ರೀ ಮಾಧವ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಸಂಜೆ ತುಳಸಿ ಅರ್ಚನೆ ನಡೆಯಲಿದೆ.
ಶ್ರಾವಣ ಮಾಸದ ಶನಿವಾರ ಆಗಿರುವ ಇಂದು ಸಂಜೆ 6.30ರಿಂದ ಮಾಧವ ದೇವರ ಸನ್ನಿಧಿಯಲ್ಲಿ ತುಳಸಿ ಆರ್ಚನೆ ಹಾಗೂ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ. ಭಕ್ತರು ಈ ಕಾರ್ಯಕ್ರಮಗಳಲ್ಲಿ ತುಳಸಿ
ದಳವನ್ನು ಸಮರ್ಪಿಸಿ ಮಾಧವದೇವರ ಕೃಪೆಗೆ
ಪಾತ್ರರಾಗಲು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ..
Tags:
ಮಾಧವ ದೇವಸ್ಥಾನ