ಛತ್ರಕೇರಿ ಶ್ರೀ ಸಿದ್ದಿವಿನಾಯಕ ಯುವಕ ಸಂಘದ 42 ನೇ ವರ್ಷದ ಗಣೇಶೋತ್ಸವ - ಎಸ್ಟು ದಿನ- ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?
ತೀರ್ಥಹಳ್ಳಿ : ಪಟ್ಟಣದ ಅತ್ಯಂತ ವೈಭವದ ಗಣೇಶೋತ್ಸವದಲ್ಲಿ ಒಂದಾಗಿರುವ, ಅಧಿಕಾರಿಗಳ ಮೆಚ್ಚಿನ ಗಣಪತಿ ಆಗಿರುವ ಛತ್ರಕೇರಿಯ ಶ್ರೀ ಸಿದ್ದಿವಿನಾಯಕ ಯುವಕ ಸಂಘದ ವತಿಯಿಂದ ಈ ಬಾರಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಗಸ್ಟ್ 27ರಿಂದ ಸೆ.6
ರವರೆಗೆ 11 ದಿನಗಳ ಪರ್ಯಂತ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ ಏನೇನು..!?
ದಿನಾಂಕ-27/8/25 ಬುಧವಾರ ಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ
31/8/25 ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ
1/9/25 ಸೋಮವಾರ ಸಂಜೆ 7 ಕ್ಕೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ
2/9/25 ಮಂಗಳವಾರ ಸಂಜೆ 7 ಕ್ಕೆ ತೀರ್ಥಹಳ್ಳಿ ಜೆ ಎನ್ ಎನ್ ಮ್ಯೂಸಿಕ್ ವರ್ಲ್ಡ್ ವಿದ್ಯಾರ್ಥಿಗಳಿಂದ ಇನ್ಸ್ಟ್ರುಮೆಂಟಲ್ ಇವೆಂಟ್ ಕಾರ್ಯಕ್ರಮ ನಡೆಯಲಿದೆ.
3/9/25 ಬುಧವಾರ ಸಂಜೆ 7 ಕ್ಕೆ ಓಂಕಾರ ಕಲಾವಿದರು, ಕನ್ನುಕೆರೆ ತೆಕ್ಕಟ್ಟೆಯವರಿಂದ ಕಣ್ಣಾ ಮುಚ್ಚಾಲೆ ಎಂಬ
ನಗೆ ನಾಟಕ ನಡೆಯಲಿದೆ.
5/9/25 ಶುಕ್ರವಾರ ಬೆಳಗ್ಗೆ 10 ಕ್ಕೆ ಗಣಹೋಮ ನಡೆಯಲಿದೆ
6/9/25 ಶನಿವಾರ ವಿವಿಧ ವೇಷ ಭೂಷಣಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದ್ದು ತುಂಗಾ ನದಿಯಲ್ಲಿ ಸ್ವಾಮಿಯ ವಿಸರ್ಜನೆ ನಡೆಯಲಿದೆ.
ನೂತನ ಕಾರ್ಯಕಾರಿ ಸಮಿತಿ
ಗೌರವಾಧ್ಯಕ್ಷರಾಗಿ ಕೃಷ್ಣಮೂರ್ತಿ (ಟಿಂಬರ್),
ರತ್ನಾಕರ ಆಚಾರ್ಯ ವಿ.ಪಿ. ಶ್ರೀನಿವಾಸ ಪೂಜಾರಿ ಅಧ್ಯಕ್ಷರಾಗಿ ವಿನಾಯಕ ಎನ್.ಶೇಟ್ ಉಪಾಧ್ಯಕ್ಷರಾಗಿ ಶಶಿಧರ್ (ಬೀಡಾ) ಕಾರ್ಯದರ್ಶಿಯಾಗಿ ಮನೋಜ್ ರತ್ನಾಕರ ಆಚಾರ್ಯ, ಸಹಕಾರ್ಯದರ್ಶಿಯಾಗಿ ಮಹೇಶ್ ಭಕ್ತ, ಅನಂತ ವಸ್ತಾರೆ ಖಜಾಂಚಿಯಾಗಿ ನವೀನ್ ಕುಮಾರ್ ಡಿ ಸಹ ಖಜಾಂಚಿಯಾಗಿ ಸಂದೀಪ್ ಎನ್. ಶೇಟ್, ಹೆಚ್.ಎಸ್. ಪವನ್ ಸ್ವಾಮಿ ಗವಾಸ್ಕರ್, ಅಜಯ್ ಕೃಷ್ಣಮೂರ್ತಿ, ವೆಂಕಟೇಶ್ (ಪುಟ್ಟ), ಅವಿನಾಶ್ ಜಿ
ಕಾರ್ಯಕ್ರಮ ನಿರ್ವಹಣೆ
ಶಿವರಾಜ್ ಆರ್. ಕಾಂಚನ್, ಸತೀಶ್ ವಿ.ಆಚಾರ್ಯ, ಹೆಚ್.ಎಸ್. ಪ್ರಸನ್ನಕುಮಾರ್ ಗವಾಂಸ್ಕರ್, ಗಣೇಶ್ ಎಂ.ಪೈ, ಕಾರ್ತಿಕ್ ಶ್ರೀಯಾನ್, ಮಂಜೇಶ್ ಜಿ.ಕೆ., ಮಿಲಿಂದ
ರಾವ್ ಶಂಕರ್, ಸತೀಶ್ ಮಾನಸ, ಜಯದೇವ ಕೃಷ್ಣ, ಗೋಪಿ, ರಾಜೇಶ್ ಪವಾರ್ ಹಾಗೂ ಇತರ ಸದಸ್ಯರು
Tags:
ಗಣೇಶೋತ್ಸವ