ಧರ್ಮಸ್ಥಳದ ವಿಚಾರದಲ್ಲಿ ಆರಗ, ಆರ್ ಎಂ ಎಂ ಒಗ್ಗಟ್ಟು - ಕಿಮ್ಮನೆಗೆ ಇಕ್ಕಟ್ಟು..!? Darmastala

ಧರ್ಮಸ್ಥಳದ ವಿಚಾರದಲ್ಲಿ ಆರಗ, ಆರ್ ಎಂ ಎಂ ಒಗ್ಗಟ್ಟು - ಕಿಮ್ಮನೆಗೆ ಇಕ್ಕಟ್ಟು..!?

ಧರ್ಮಸ್ಥಳ ವಿಚಾರದಲ್ಲಿ ಕಿಮ್ಮನೆ ಮೌನ ಆಗಿರುವುದು ಏಕೆ? ಸಾರ್ವಜನಿಕರ ಪ್ರೆಶ್ನೆ..!?

ತೀರ್ಥಹಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧವಾಗಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಹೋರಾಟ ನಡೆಯುತ್ತಿದ್ದು ತೀರ್ಥಹಳ್ಳಿಯಲ್ಲೂ ಹೋರಾಟ ನಡೆಸಲು ಸಕಲ ಸಿದ್ದತೆ ನಡೆದಿದೆ. ಈ ಪ್ರತಿಭಟನೆ ಪಕ್ಷಾತೀತವಾಗಿ ನಡೆಯುತ್ತಿದ್ದು ಆರಗ ಹಾಗೂ ಆರ್ ಎಂ ಎಂ ಒಗ್ಗಟ್ಟಾಗಿ ಕಾಣಿಸುತ್ತಿದ್ದಾರೆ ಕಿಮ್ಮನೆ ಇಕ್ಕಟ್ಟಿಗೆ ಸಿಲುಕಿದ್ದಾರಾ ಎಂಬ ಪ್ರೆಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣ ಆಗಿರುವುದು ಮೇಲ್ನೋಟಕ್ಕೆ ಅಲ್ಲದೆ ಈಗ ಕಣ್ಣೆದುರಿಗೆ ಕಾಣಿಸುವಂತೆ ಆಗಿದೆ. ಧರ್ಮಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರಂತೆ ಅವರ ಬಣದ ಮುಖಂಡರು ಅದೇ ಮಾರ್ಗ ಅನುಸರಿಸಿದ್ದಾರಾ? ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗಡೆ ಅವರ ಪರವಾಗಿ ಪ್ರತಿಭಟನೆ ವಿಚಾರದ ಸಭೆಯಲ್ಲಿ ಕಿಮ್ಮನೆ ಭಾಗವಹಿಸದೆ ಇರುವುದು ಈಗ ಚರ್ಚೆಗೆ ಕಾರಣವಾಗಿದೆ.
ಹಿಂದೂ ಸಮಾಜ, ಹಿಂದುತ್ವ, ದೇವಸ್ಥಾನದ ವಿಚಾರವಾಗಿ ಮಾತನಾಡುವ ಕಿಮ್ಮನೆ ರತ್ನಾಕರ್ ಧರ್ಮಸ್ಥಳ ದೇವಸ್ಥಾನವನ್ನು ಯಾರೋ ಕಿಡಿಗೇಡಿಗಳ ಷಡ್ಯಂತ್ರದಿಂದ ದೇವಸ್ಥಾನ ಉಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಹೋರಾಟ ನಡೆಯುತ್ತಿದ್ದರು ಕಿಮ್ಮನೆ ರತ್ನಾಕರ್ ಆ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ? ಎಂಬ ಪ್ರೆಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ನ ಎರಡು ಬಣದ ನಾಯಕರ ಮುಸುಕಿನ ಗುದ್ದಾಟ ಈಗ ಸಾರ್ವಜನಿಕವಾಗಿಯೇ ಕಾಣಿಸತೊಡಗಿದೆ.. ಮಂಗಳವಾರ ನಡೆಯುವ ಪ್ರತಿಭಟನೆಯಲ್ಲಿ ಕಿಮ್ಮನೆ ಭಾಗಿಯಾಗ್ತಾರಾ? ಅಥವಾ ಪ್ರತಿಭಟನೆಯಲ್ಲಿ ಭಾಗಿಯಾಗದೆ  ಕಿಮ್ಮನೆ ದೂರ ಉಳಿಯುತ್ತಾರ? ಕಾದು ನೋಡಬೇಕಿದೆ...
Previous Post Next Post