ತೀರ್ಥಹಳ್ಳಿ ಬಸ್‌ ಸ್ಟಾಂಡ್ ಬಳಗದಿಂದ 22 ನೇ ವರ್ಷದಅದ್ಧೂರಿ ಗಣೇಶೋತ್ಸವ- ಈ ಬಾರಿ ಎಷ್ಟು ದಿನ, ಏನೆಲ್ಲಾ ಕಾರ್ಯಕ್ರಮ ಇರುತ್ತೆ..!? Bus Stand Ganeshotsava

ತೀರ್ಥಹಳ್ಳಿ ಬಸ್‌ ಸ್ಟಾಂಡ್ ಬಳಗದಿಂದ 22 ನೇ ವರ್ಷದ ಅದ್ಧೂರಿ  ಗಣೇಶೋತ್ಸವ- ಈ ಬಾರಿ ಎಷ್ಟು ದಿನ, ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?

ತೀರ್ಥಹಳ್ಳಿ :  ಪಟ್ಟಣದ ಮುಖ್ಯ ಬಸ್‌ ನಿಲ್ದಾಣದಲ್ಲಿ
ಬಸ್ ಸ್ಟಾಂಡ್ ಬಳಗದ ವತಿಯಿಂದ 22 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು  ಆ. 27 ರಿಂದ ಸೆ. 4 ರವರೆಗೆ 9 ದಿನಗಳ ಪರ್ಯಂತ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಆ. 30 ರಂದು ಗಣಹೋಮ, ಸಾರ್ವಜನಿಕ ಸತ್ಯನಾರಾಯಣ ವ್ರತ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಇದೇ ದಿನ
ಸಂಜೆ ಧ್ರುವತಾರೆ ಮ್ಯೂಸಿಕಲ್, ಪ್ರಶಾಂತ್‌ ಪ್ರಭು, ಉತ್ತಮೇಶ್ವರ - ಕೊಪ್ಪ ಇವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.

 
ಆ. 31 ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ನಡೂರು ಮೇಳದ ಆಯ್ದ ಕಲಾವಿದರಿಂದ ಶ್ರೀ ಜಗನ್ಮಾತೆ ವನದುರ್ಗಿ ಪೌರಾಣಿಕ ಕಥೆಯ ಕಾಲಮಿತಿಯ ಯಕ್ಷಗಾನವನ್ನು ಏರ್ಪಡಿಸಲಾಗಿದೆ.

ಸೆಪ್ಟೆಂಬರ್ 2 ರಂದು ವಿದುಷಿ ಅರುಂಧತಿ ಮತ್ತು ತಂಡ, ಶ್ರೀ ರಾಜರಾಜೇಶ್ವರಿ ನೃತ್ಯ ಕಲಾಕೇಂದ್ರ, ಕೆ.ಸಿ. ರಸ್ತೆ, ತೀರ್ಥಹಳ್ಳಿ ಹಾಗೂ ವಿದುಷಿ ಶ್ರೀಲತಾ ಮತ್ತು ತಂಡ, ಶ್ರೀ ಸುಮುಖ ಸಂಗೀತ ಮತ್ತು ನೃತ್ಯಶಾಲೆ (ರಿ.) ರಥಬೀದಿ,
ತೀರ್ಥಹಳ್ಳಿ ಇವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. 

ಸೆ. 4 ರಂದು ಮಂಗಳವಾದ್ಯ ಹಾಗೂ ಮಂಗಳೂರು - ಕಾರ್ಕಳ - ಕಡಾರಿಯ ವಿವಿಧ ವೇಷಭೂಷಣಗಳಿಂದ ಶ್ರೀ ಮಹಾಗಣಪತಿಯ ಅದ್ದೂರಿಯ ರಾಜಬೀದಿ ಉತ್ಸವದೊಂದಿಗೆ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಒಟ್ಟು ಒಂಬತ್ತು ದಿನಗಳ ಪರ್ಯಂತ ನಡೆಯುವ ಈ ಗಣೇಶೋತ್ಸವದಲ್ಲಿ ತಾಲೂಕಿನ ಎಲ್ಲಾ ಸಾರ್ವಜನಿಕರು ಭಾಗಿಯಾಗಿ ತನು - ಮನ - ಧನ ಸಹಕಾರ ನೀಡಲು ಬಸ್ಟ್ಯಾಂಡ್ ಬಳಗ ವಿನಂತಿಸಿದೆ..


ಇನ್ನು ಬಸ್ಟ್ಯಾಂಡ್ ಬಳಗದ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸಂತೆಕೊಪ್ಪ ನಿರಂಜನ್, ಗೌರವಾಧ್ಯಕ್ಷರಾಗಿ ಪ್ರದೀಪ್ ಬೆಜ್ಜವಳ್ಳಿ, ಉಪಾಧ್ಯಕ್ಷರಾಗಿ ಅನೂಪ್‌ ಬೆಜ್ಜವಳ್ಳಿ, ಹೆದ್ದೂರು ಮಂಜುನಾಥ್, ಕಾರ್ಯದರ್ಶಿಯಾಗಿ ಜ್ಞಾನೇಂದ್ರ ಸರಳ, ಹರೀಶ್ ಹೊನ್ನಾಸ್ ಗದ್ದೆ, ಸಹಕಾರ್ಯದರ್ಶಿಗಳಾಗಿ ಪ್ರಕಾಶ್ ಟಿ.ಪಿ., ಸಂತೋಷ ಬೆಜ್ಜವಳ್ಳಿ, ಖಜಾಂಚಿಯಾಗಿ ಸೂರ್ಯಕಾಂತ್ ಬೆಟ್ಟಮಕ್ಕಿ,
ಸಹ ಖಜಾಂಚಿಗಳಾಗಿ ಪ್ರಕಾಶ್ ಬೆಜ್ಜವಳ್ಳಿ, ಮಂಜುನಾಥ್ ಕೆಳಕೆರೆ, ರಾಘವೇಂದ್ರ ಭಟ್ ಹೊಸಳ್ಳಿ, ಅನಿಲ್ ಮಧುಗೆರೆ ನೇಮಕಗೊಂಡಿದ್ದಾರೆ. 

ನಿರ್ದೇಶಕರುಗಳಾಗಿ ಕೃಷ್ಣಶೆಟ್ಟಿ, ಬದನೆಹಿತ್ಲು , ಮಹೇಶ್ ಪೂಜಾರಿ ಸಂಕದಹೊಳೆ, ಸುಭಾಷ್ ತೀರ್ಥಹಳ್ಳಿ,
ಶೈಲೇಂದ್ರ ಕೆಸರೆ, ನಾಗರಾಜ್ ಟೆಂಕಬೈಲು, ಮಂಜುನಾಥ ಶೆಟ್ಟಿ ತುಡ್ಡಿ, ಗುರುಪ್ರಸಾದ್ ತೀರ್ಥಹಳ್ಳಿ, ರಾಜ ಗೋಪಾಲ್ ಮೇಗರವಳ್ಳಿ, ಸತೀಶ್ ಸುರಾನಿ, ಪ್ರದೀಪ್ ದಬ್ಬಣಗದ್ದೆ, ಕುಮಾರ್ ಶೆಟ್ಟಿ ಕೋಟೆಗದ್ದೆ, ವಿನಯ್ ಕುಮಾರ್ ಬಸವಾನಿ, ಇನಾಸ್ ಡಿ'ಸೋಜ ಸೀಬಿನಕೆರೆ, ಖಾದರ್ ಸಾಬ್ ಬಾಳೇಬೈಲು, ಯೋಗೀಶ್ ನಾಯಕ್ ಬಾಳೇಬೈಲು, ಸುಮಂತ್ ಕಡಿದಾಳು, ಮಂಜುನಾಥ್ ಸೊಪ್ಪುಗುಡ್ಡೆ, ಕೇಶವ ಆರಗ, ಮಧು ಅರಳಸುರಳಿ, ಸುಶಾಂತ್ ಮಿಲ್ಕೇರಿ, ಕಾಂತಿಕುಮಾರ್ ಮಧುಗೆರೆ ನೇಮಕಗೊಂಡಿದ್ದಾರೆ.
Previous Post Next Post