ಪ್ರಬುದ್ಧ ರಾಜಕಾರಣಿಗಳು ಎಂದೇ ಹೇಳಲ್ಪಡುವ ಇಬ್ಬರು ರಾಜಕಾರಣಿಗಳು ತೀರ್ಥಹಳ್ಳಿಗೆ ಸಿಕ್ಕಿದ್ದಾರೆ - ನಟಿ ಉಮಾಶ್ರೀ Umashri in thirthahalli

ಪ್ರಬುದ್ಧ ರಾಜಕಾರಣಿಗಳು ಎಂದೇ ಹೇಳಲ್ಪಡುವ ಇಬ್ಬರು ರಾಜಕಾರಣಿಗಳು ತೀರ್ಥಹಳ್ಳಿಗೆ ಸಿಕ್ಕಿದ್ದಾರೆ - ನಟಿ ಉಮಾಶ್ರೀ

ತೀರ್ಥಹಳ್ಳಿ : ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ರತ್ನಾಕರ್ ಅವರ ಜೊತೆಗೆ ಕಾರ್ಯ ನಿರ್ವಹಿಸಿದ್ದೇನೆ. ಇವರಿಬ್ಬರ ಜೊತೆಗೆ ಕೆಲಸ ಮಾಡುವುದು ಬಹಳ ಸಂತೋಷ ಕೊಡುತ್ತದೆ. ಪ್ರಬುದ್ಧ ರಾಜಕಾರಣಿಗಳು ಎಂದೇ ಹೇಳಲ್ಪಡುವ ಇಬ್ಬರು ರಾಜಕಾರಣಿಗಳು ತೀರ್ಥಹಳ್ಳಿಗೆ ಸಿಕ್ಕಿದ್ದಾರೆ ಎಂದರೆ ತಪ್ಪಾಗಲಾರದು ಎಂದು ವಿಧಾನ ಪರಿಷತ್ ಸದಸ್ಯೆ ಹಾಗೂ ಚಲನಚಿತ್ರ ನಟಿಯಾಗಿರುವ ಉಮಾಶ್ರೀ ಹೇಳಿದರು.

ಪಟ್ಟಣ ಪಂಚಾಯತ್ ನಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತೀರ್ಥಹಳ್ಳಿಗೆ ಈ ಹಿಂದೆ ಸಹ ನಾಟಕಕ್ಕಾಗಿ ಬಂದಿದ್ದೆ. ಬಹಳ ವರ್ಷಗಳ ನಂತರ ಶರ್ಮಿಷ್ಟೆ ಎಂಬ ನಾಟಕ ಮಾಡುತ್ತಿದ್ದೇನೆ. ಸಾಮಾನ್ಯವಾಗಿ ರಾಜಕೀಯ ಸನ್ಮಾನಕ್ಕೆ ನಾನು ಹೋಗುವುದಿಲ್ಲ. ಆದರೆ ಇಲ್ಲಿ ನಾಗರೀಕ ಸನ್ಮಾನ ಎಂದು ಹೇಳಿದಾಗ ಒಪ್ಪಿಕೊಂಡೆ. ಕಲಾವಿದ ಎಂದಾಗ ಅದರಲ್ಲಿ ರಾಜಕೀಯ ಮಾಡಬಾರದು.ಎಲ್ಲಾ ಸಿದ್ದಂತಾ ಒಪ್ಪಿಕೊಂಡು ಕೆಲಸ ಮಾಡುವ ಕ್ಷೇತ್ರ ಸಾಂಸ್ಕೃತಿಕ ಕ್ಷೇತ್ರ. ಅಂತರಂಗದ ಘಟನೆಗಳನ್ನ ಬಿಚ್ಚಿಡುವ ಒಂದು ವಿಶೇಷವಾದ ನಾಟಕ. ನಿಮ್ಮೆಲ್ಲರಿಗೂ ಈ ನಾಟಕ ಇಷ್ಟ ಆಗಬಹುದು ಎಂದು ನಂಬಿದ್ದೇನೆ ಎಲ್ಲರೂ ನಾಟಕಕ್ಕೆ ಬನ್ನಿ ಎಂದರು.

ಆರಗ ಜ್ಞಾನೇಂದ್ರ ಮಾತನಾಡಿ  ನಾಡಿನ ಕಲಾ ಪ್ರಪಂಚದ ಹೆಗ್ಗುರುತು ಉಮಾಶ್ರೀ ಅವರು. ನಾನು ಅವರ ಅಪ್ಪಟ ಅಭಿಮಾನಿ, ಪುಟ್ನಂಜ ಚಿತ್ರವನ್ನು ಹಲವು ಭಾರಿ ನೋಡಿದ್ದೇನೆ. ಅವರ ಪರಿಶ್ರಮ ಬಹಳಷ್ಟು ಇದೆ. ಯಾರದ್ದೋ ಕೃಪಾಕಟಾಕ್ಷದಿಂದ ಬಂದವರಲ್ಲ. ನಾನು ಅವರು ಈಗ ಒಂದೇ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ತೀರ್ಥಹಳ್ಳಿಯಲ್ಲಿ ತುಂಬಾ ಜನರಿಗೆ ಪೌರ ಸನ್ಮಾನ ಮಾಡಿದ್ದೇವೆ ಈಗ ಅದರಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದೆ. ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಕಿಮ್ಮನೆ ರತ್ನಾಕರ್ ಮಾತನಾಡಿ  ಉಮಾಶ್ರೀ ಅವರ ಜೊತೆಗೆ ನಾನು ಕೆಲಸ ನಿರ್ವಹಿಸಿದ್ದೇನೆ. ಒಟ್ಟಿಗೆ ಅಕ್ಕಪಕ್ಕ ಕುಳಿತು ಕಾರ್ಯನಿರ್ವಹಿಸಿದ್ದೇವೆ. ತೀರ್ಥಹಳ್ಳಿಗೆ ಕಾರ್ಯಕ್ರಮಕ್ಕಾಗಿ ಬರುತ್ತಿದ್ದೇನೆ ಎಂದು ತಿಳಿಸಿದ್ದರು ಆ ನಂತರ ನಾನೇ ಅಧ್ಯಕ್ಷರ ಬಳಿ ಪೌರ ಸನ್ಮಾನ ಮಾಡಲು ಹೇಳಿದ್ದೆ. ನಾಟಕ ಮಾಡಲು ಬಂದಾಗ ಆ ಸಭೆಯಲ್ಲಿ ರಾಜಕೀಯ ಮಾಡುವುದು ಬೇಡ ಎಂಬ ಕಾರಣದಿಂದ ಪಟ್ಟಣ ಪಂಚಾಯತ್ ನಲ್ಲಿ ಸನ್ಮಾನ ಮಾಡಿದ್ದೇವೆ. ಏಕ ಪಾತ್ರಾಭಿನಯ ನಾಟಕ ಯಶಸ್ವಿ ಆಗಲಿ ಎಂದು ಹಾರೈಸಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.
ಪಟ್ಟಣ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ
ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.



Previous Post Next Post