ನಾಳೆ ನಟಿ ಉಮಾಶ್ರೀ ಅವರಿಗೆ ತೀರ್ಥಹಳ್ಳಿಯಲ್ಲಿ ಪೌರ ಸನ್ಮಾನ tth

ನಾಳೆ ನಟಿ ಉಮಾಶ್ರೀ ಅವರಿಗೆ ತೀರ್ಥಹಳ್ಳಿಯಲ್ಲಿ ಪೌರ ಸನ್ಮಾನ
ತೀರ್ಥಹಳ್ಳಿ: 13.07.2025ರ ಭಾನುವಾದಂದು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಧ್ಯಾಹ್ನ 1.30ಕ್ಕೆ  ರಾಜ್ಯದ ಖ್ಯಾತ ಚಿತ್ರನಟಿ, ರಂಗ ಕಲಾವಿದೆ ಉಮಾಶ್ರೀ ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.  

ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮವೊಂದಕ್ಕಾಗಿ ಆಗಮಿಸುತ್ತಿರುವ ಉಮಾಶ್ರೀ ಅವರು ಪಟ್ಟಣ ಪಂಚಾಯಿತಿಗೆ ಆಗಮಿಸುತ್ತಿದ್ದಾರೆ.  ಪಟ್ಟಣದ ಸಮಸ್ತ ನಾಗರಿಕರ ಪರವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಉಮಾಶ್ರೀ ಅವರನ್ನು ತೀರ್ಥಹಳ್ಳಿ ಜನತೆಯ ಪರವಾಗಿ ಪೌರ ಸನ್ಮಾನ ನಡೆಸಲು ತೀರ್ಮಾನಿಸಲಾಗಿದೆ.

ಪಟ್ಟಣ ಪಂಚಾಯತ್‌ ಅಧ್ಯಕ್ಷರಾದ ರಹಮತ್‌ ಉಲ್ಲಾ ಅಸಾದಿ ಸರ್ವರನ್ನು ಸ್ವಾಗತಿಸಿದ್ದಾರೆ.
Previous Post Next Post