ನಾಳೆ 423 ರೂ ಕೋಟಿ ವೆಚ್ಚದ ಸಿಗಂದೂರು ಬ್ರಿಡ್ಜ್​ ಉದ್ಘಾಟನೆ; ಈ ಕೇಬಲ್ ಸೇತುವೆಯ ವಿಶೇಷತೆ ಏನೇನು..? Sigandooru Bridge

ನಾಳೆ 423 ರೂ ಕೋಟಿ ವೆಚ್ಚದ ಸಿಗಂದೂರು ಬ್ರಿಡ್ಜ್​ ಉದ್ಘಾಟನೆ; ಈ ಕೇಬಲ್ ಸೇತುವೆಯ ವಿಶೇಷತೆ ಏನೇನು..?


ಸಾಗರ : ತಾಲೂಕಿನ ಅಂಬಾರಗೊಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ನಾಳೆ ಲೋಕಾರ್ಪಣೆ ಆಗಲಿದೆ. ಕೇಬಲ್ ಸೇತುವೆ ಇದಾಗಿದ್ದು, 423 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ , ಪ್ರಹ್ಲಾದ್ ಜೋಶಿ ಅವರು ನಾಳೆ ಬೆಳಗ್ಗೆ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸೇತುವೆ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಸೇತುವೆ ಉದ್ಘಾಟನೆ ನಂತರ ಮಧ್ಯಾಹ್ನ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಅದರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ  ಕೂಡ ಬರುವ ಸಾಧ್ಯತೆ ಇದೆ.

ಸೇತುವೆಯ ವಿಶೇಷತೆಗಳು ಏನೇನು..?

ಟೆಂಡರ್ ಮೊತ್ತ 423 ಕೋಟಿ ರೂಪಾಯಿ
ಕಾಮಗಾರಿ ಆರಂಭವಾದ ದಿನ 2019, ಡಿಸೆಂಬರ್ 12
ಕಾಮಗಾರಿ ಮುಕ್ತಾಯವಾದ ದಿನ 2025, ಜುಲೈ 14
ಕಾಮಗಾರಿ ನಿರ್ವಹಿಸಿದ ಏಜೆನ್ಸಿ -ದಿಲೀಪ್ ಬಿಲ್ಡ್ ಕಾನ್
ಸೇತುವೆಯ ಉದ್ದ-2125 ಮೀಟರ್
ಸೇತುವೆಯ ಅಗಲ- 16 ಮೀಟರ್
ಸೇತುವೆ ಫುಟ್​ಪಾತ್ 2*1.5 ಮೀಟರ್
ಸಂಪರ್ಕ ರಸ್ತೆ 1.05 ಕೀಮೀ ನಿಂದ 3 ಕೀಮಿ
ತಳಪಾಯ 164 ಫೈಲ್ಸ್
ಉಕ್ಕಿನ ಕೇಬಲ್ ಉದ್ದ 470 ಮೀಟರ್
ಕೇಬಲ್ ಎತ್ತರ 38.50 ಮೀಟರ್


Previous Post Next Post