ತೀರ್ಥಹಳ್ಳಿಯಲ್ಲಿ ಮರಕ್ಕೆ ವಿಷ ಹಾಕಿದ ಪ್ರಕರಣ - ಆರೋಪಿಗಳಿಗೆ ನವ ನವೀನ ಆಟ ಆಡುವಂತೆ ಹೇಳಿದ್ರಾ ಅಧಿಕಾರಿಗಳು...!? Tth

ತೀರ್ಥಹಳ್ಳಿಯಲ್ಲಿ ಮರಕ್ಕೆ ವಿಷ ಹಾಕಿದ ಪ್ರಕರಣ - ಆರೋಪಿಗಳಿಗೆ ನವ ನವೀನ ಆಟ ಆಡುವಂತೆ ಹೇಳಿದ್ರಾ ಅಧಿಕಾರಿಗಳು...!?


ತೀರ್ಥಹಳ್ಳಿ : ಕೊಪ್ಪ ಸರ್ಕಲ್ ಬಳಿ ಹಾಗೂ ಆಗುಂಬೆ ಬಸ್ ನಿಲ್ದಾಣದ ಬಳಿ ಡಿವೈಡರ್ ಮೇಲೆ ಇದ್ದಂತಹ ಮೂರ್ನಾಲ್ಕು ಮರಗಳಿಗೆ ರಾತ್ರೋ ರಾತ್ರಿ ಕಾರಿನಲ್ಲಿ ಬಂದ ಕೆಲವು ಕಿಡಿಗೇಡಿಗಳು ಮರದ ಬುಡಕ್ಕೆ ವಿಷ ಹಾಕಿ ಹೋಗಿದ್ದರು.  ಈ ವಿಚಾರದಲ್ಲಿ ಶಿವಮೊಗ್ಗ ಸುದ್ದಿ ವರದಿ ಮಾಡಿ ದೂರು ದಾಖಲಾಗುವಂತೆ ಮಾಡಿತ್ತು.

ಈಗ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಆರೋಪಿಗಳ ಬೆನ್ನಿಗೆ ಅಧಿಕಾರಿಗಳು ನಿಂತು 
"ನವ ನವೀನ" ರೀತಿಯಲ್ಲಿ ಆಟ ಆಡುವಂತೆ ಹೇಳಿ ನಿಮ್ಮ ಮೇಲೆ ಕೇಸ್ ದಾಖಲಾದರೂ ಏನು ಮಾಡಲಾಗುವುದಿಲ್ಲ ಎಂದು ಹೇಳಿ ಹಣ ಪಿಕಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಬ್ಯಾನರ್ ಕೂಡ ತೆರವು ಮಾಡದೇ ಇರುವುದರಿಂದ ನಿಜವಾಗಲೂ ಅಧಿಕಾರಿಗಳು 
ಆರೋಪಿಗಳ ಬೆನ್ನಿಗೆ ನಿಂತರೆ? ಎಂಬ ಮಾತು ಕೇಳಿ ಬರುತ್ತಿದೆ.

ಇದು ರಾಷ್ಟ್ರೀಯ ಹೆದ್ದಾರಿ ರಸ್ತೆ ಆಗಿದ್ದು ಮರಕ್ಕೆ ವಿಷ ಹಾಕಿದ ವಿಚಾರ ಮಾಧ್ಯಮಗಳಲ್ಲಿ ವರದಿಯಾದ ವೇಳೆ ಬ್ಯಾನರ್ ತೆರವು ಮಾಡಲು ಆದೇಶ ಹೊರಡಿಸಿತ್ತು. ಆದರೆ ಇಲ್ಲಿಯವರೆಗೆ ಬ್ಯಾನರ್ ತೆರವುಗೊಂಡಿಲ್ಲ. ಹಣಕ್ಕೆ ಇರುವ ಬೆಲೆ ಮರಕ್ಕೆ ಇಲ್ಲ ಎಂದು ಸಾರ್ವಜನಿಕರು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ವಿಷ ಹಾಕಿದ್ದ ಮರ ಪಟ್ಟಣ ಪಂಚಾಯತ್ ಅಧಿಕಾರಿಗಳು ಬುಡದಲ್ಲಿ ಮಣ್ಣು ತೆಗೆದು ಕ್ಲಿನ್ ಮಾಡಿದ್ದರೂ ಸಹ ಹಸಿರು ಹಸಿರಾಗಿ ಬೆಳದಿದ್ದ ಮರ ತನ್ನೆಲ್ಲಾ ಎಲೆಗಳನ್ನು ಉದುರಿಸಿಕೊಂಡು ನನ್ನಯ ಗೋಳು ಕೇಳುವವರು ಯಾರು? ಎಂದು ಸೊರಗುತ್ತಾ ಇದೆ..



Previous Post Next Post