ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಗಮನ ಸೆಳೆದ ಅಸಾದಿ ಮಾತುಗಾರಿಕೆ
ತೀರ್ಥಹಳ್ಳಿ: ಜುಲೈ 4 ಮತ್ತು 5 ರಂದು ಹರಿಯಾಣ ರಾಜ್ಯದ
ಗುರ್‌ಗಾವ್‌ನಲ್ಲಿ ಅಲ ಭಾರತ ಮಟ್ಟದ ಸ್ಥಳೀಯ ಸಂಸ್ಥೆಗಳ
ಪ್ರತಿನಿಧಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿ
ಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಹರಿಯಾಣ ವಿಧಾನ ಸಭೆಯ ಸಭಾಪತಿಗಳು, ಉಪಸಭಾಪತಿ ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ 700ಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳ ಪೈಕಿ 15 ಮಂದಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು . ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಅವರಿಗೂ ಓಂ ಬಿರ್ಲಾರ ಸಮ್ಮುಖದಲ್ಲಿ ನಗರಾಡಳಿತ ಸಂಸ್ಥೆಗಳ ಸಮಸ್ಯೆ, ಆಗಬೇಕಾದ ಸುಧಾರಣೆಗಳ ಕುರಿತು ಮಾತನಾಡಲು ಅವಕಾಶ ಲಭಿಸಿತು. 10 ನಿಮಿಷ ಹಿಂದಿಯಲ್ಲಿ ತಮ್ಮ ವಿಚಾರಗಳನ್ನು ಅಸಾದಿ ಮಂಡಿಸಿದರು. ಅವರ ಮಾತುಗಾರಿಕೆ, ವಿಚಾರ ಪಕ್ವತೆ ಓಂಬಿರ್ಲಾ ಆದಿಯಾಗಿ ಸಮ್ಮೇಳನದಲ್ಲಿದ್ದವರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಯಿತು.
ಅಧಿಕಾರ ಷಾಹಿ ಮತ್ತು ರಾಜಕಾರಣಿಗಳ ಹಸ್ತಕ್ಷೇಪ,ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆ
ತರುತ್ತಿದೆ. ಅನುದಾನಗಳ ಕೊರತೆಯಿಂದ ನಗರಾಡಳಿತ ಸಂಸ್ಥೆಗಳು ಸೊರಗುತ್ತಿವೆ. ನಗರಾಡಳಿತ ಸಂಸ್ಥೆಗಳು ಯಾವ ರೀತಿ ಸಂಪನ್ಮೂಲ ಕ್ರೋಢೀಕರಿಸಬಹುದು ಎಂಬಿತ್ಯಾದಿ ವಿಚಾರಗಳ ಕುರಿತು ಅಸಾದಿ ಪರಿಣಾಮಕಾರಿಯಾಗಿ ಮಾತನಾಡಿದರು. ಹರಿಯಾಣದ ಹಿಂದಿನ ವಿಧಾನ ಸಭೆ ಹಾಗೂ ಈಗಿನ ವಿಧಾನ ಸಭೆಗಳಿಗೆ ಓಂ ಬಿರ್ಲಾರ ಜೊತೆಯಲ್ಲಿ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿದರು.
Tags:
ಪಟ್ಟಣ ಪಂಚಾಯತ್