ಟೆಂಡರ್ ಎಂಬ ನೆಪದಲ್ಲಿ ಅಧಿಕಾರಿಗಳ
ಚೆಲ್ಲಾಟ - ಮಕ್ಕಳಿಗೆ ಪ್ರಾಣ ಸಂಕಟ..!
ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ಶೌಚಾಲಯ ವ್ಯವಸ್ಥೆ..!?
ತೀರ್ಥಹಳ್ಳಿ : ಶಾಲೆ ಪ್ರಾರಂಭವಾಗಿ ಸರಿ ಸುಮಾರು 45 ದಿನಗಳು ಕಳೆದರು ಶಾಲೆಗೆ ಸಮರ್ಪಕ ಶೌಚಾಲಯ ವ್ಯವಸ್ಥೆ ಮಾಡಲು, ಶಾಸಕರು, ಪಟ್ಟಣ ಪಂಚಾಯತ್ ಅಧಿಕಾರಿಗಳು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಟೆಂಡರ್ ನೆಪದಲ್ಲಿ ಕೆಲಸ ಮಾಡಲು ಆಗದೇ ಇರುವುದನ್ನು ನೋಡಿದ ಪೋಷಕರು ಈ ಬಾರಿ ಶಾಲೆ ಪೂರ್ಣಗೊಂಡ ಮೇಲೆ ಸಮರ್ಪಕ ಶೌಚಾಲಯ ವ್ಯವಸ್ಥೆ ಮಾಡಬಹುದು ಎಂದು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ.
ಸೀಬಿನಕೆರೆ ಸರ್ಕಾರಿ ಶಾಲೆಗೆ ದತ್ತು ತೆಗದುಕೊಂಡವರು ಒಬ್ಬರಾದರೆ, ತಾಲೂಕಿನ ಶಾಲೆಗಳ ಅಭಿವೃದ್ಧಿಗಾಗಿ ನನ್ನದೇ ಕೊಡುಗೆ ಎನ್ನುವ ಮತ್ತೊಬ್ಬರು. ಇವರಿಬ್ಬರ ಕಥೆಯಲ್ಲಿ ಈ ಮಳೆಗಾಲದ ಸಂದರ್ಭದಲ್ಲಿ ಮೂತ್ರ ಕಟ್ಟಿಕೊಂಡು ಯಾರಲ್ಲೂ ಹೇಳಲು ಆಗದೇ ಮಕ್ಕಳು ಹೈರಾಣಾಗಿ ಹೋಗಿದ್ದಾರೆ. ಶೌಚಾಲಯ ವ್ಯವಸ್ಥೆ ನಾನು ಮಾಡಿಸುತ್ತೇನೆ, ನಾನು ಮಾಡಿಸುತ್ತೇನೆ ಅದಕ್ಕಾಗಿ ಹಣ ನಾನು ನೀಡುತ್ತೇನೆ ಎಂದು ಭರವಸೆ ಕೊಟ್ಟ ಇಬ್ಬರು ಪ್ರಮುಖರು ಇಲ್ಲಿಯವರೆಗೆ ಶಾಲೆ ಬಳಿ ಸುಳಿದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಹೇಳುವವರು, ಶಾಲೆಯಲ್ಲಿ 250 ಕ್ಕೂ ಹೆಚ್ಚು ಮಕ್ಕಳಿದ್ದರು ಬೇಕಾಗುವ ಮೂಲಭೂತ ಸೌಕರ್ಯ ನೀಡದೆ, ಭರವಸೆ ಕೊಟ್ಟು ಕೈ ತೊಳೆದುಕೊಳ್ಳುವ ಬದಲಿಗೆ ತಮ್ಮ ಕೈಯಲ್ಲಿ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳುವುದು ಉತ್ತಮ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
Tags:
ತೀರ್ಥಹಳ್ಳಿ ಸುದ್ದಿ