ಮೇಗರವಳ್ಳಿ ಬಳಿ ಬಸ್ ಹಾಗೂ ಕ್ಯಾರಿ ನಡುವೆ ಅಪಘಾತ - ಕ್ಯಾರಿ ಚಾಲಕನಿಗೆ ಗಾಯ Megaravalli

ಮೇಗರವಳ್ಳಿ ಬಳಿ  ಬಸ್ ಹಾಗೂ ಕ್ಯಾರಿ ನಡುವೆ ಅಪಘಾತ - ಕ್ಯಾರಿ ಚಾಲಕನಿಗೆ ಗಾಯ 


ತೀರ್ಥಹಳ್ಳಿ : ಖಾಸಗಿ ಬಸ್ ಹಾಗೂ ಕ್ಯಾರಿ ನಡುವೆ ಅಪಘಾತ ಸಂಭವಿಸಿ ಕ್ಯಾರಿ ಚಾಲಕನಿಗೆ ಗಾಯವಾಗಿರುವ ಘಟನೆ ತಾಲೂಕಿನ ಮೇಗರವಳ್ಳಿ ಬಳಿ ನಡೆದಿದೆ.

ತೀರ್ಥಹಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ತೀರ್ಥಹಳ್ಳಿ ಕಡೆ ಬರುತ್ತಿದ್ದ ಕ್ಯಾರಿ ನಡುವೆ ಅಪಘಾತ ಸಂಭವಿಸಿದೆ. ಕ್ಯಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಖಾಸಗಿ ಬಸ್ ಹಾಗೂ ಕ್ಯಾರಿ ವಾಹನದ ಮುಂಭಾಗ ಜಖಂಗೊಂಡಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



Previous Post Next Post