ಇ-ಪೌತಿ ಅಭಿಯಾನ ಆರಂಭ - ತೀರ್ಥಹಳ್ಳಿ ತಹಶೀಲ್ದಾರ್ ಕರೆ...Taluk Office

ಇ-ಪೌತಿ ಅಭಿಯಾನ ಆರಂಭ - ತೀರ್ಥಹಳ್ಳಿ ತಹಶೀಲ್ದಾರ್ ಕರೆ...


ತೀರ್ಥಹಳ್ಳಿ : ವಾರಸುದಾರರ ಹಕ್ಕು ಬದಲಾವಣೆಯಾಗದಿರುವ ಪಹಣಿಗಳ ಇ- ಪೌತಿ ಅಭಿಯಾನ ಶುರುವಾಗಿದೆ. ಸರ್ಕಾರದ ಆದೇಶದಂತೆ ಮರಣ ಹೊಂದಿದ ಖಾತೆದಾರರ ಹೆಸರನ್ನು ತೆಗೆದು ಅದರ ಕಾನೂನು ಬದ್ದ ವಾರಸುದಾರರ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಅನುಕೂಲವನ್ನು ರೈತ ಬಾಂಧವರು‌ ಬಳಸಿಕೊಳ್ಳಬೇಕಾಗಿ ತೀರ್ಥಹಳ್ಳಿ ತಾಲ್ಲುಕು ದಂಢಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ಸಂಬಂಧಪಟ್ಟವರು ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ಕುಟುಂಬದ ವಂಶವೃಕ್ಷ, ಆಧಾರ್ ಕಾರ್ಡ್ , ಪಹಣಿಯೊಂದಿಗೆ ಸಂಬಂಧಿಸಿದ ಗ್ರಾಮಾಡಳಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸರಿಪಡಿಸಿಕೊಳ್ಳದ ಪಹಣಿಮೇಲೆ ಸರ್ಕಾರದಿಂದ ಸಿಗುವ ಬೆಳೆ ಪರಿಹಾರ, ಬೆಳೆ ವಿಮೆ , ಪಿಎಂ ಕಿಸಾನ್ ಯೋಜನೆ, ಬೀಜ-ಗೊಬ್ಬರ ಮತ್ತು ಇದ್ಯಾದಿ ಸೌಲಭ್ಯ ದೊರಕುವುದಿಲ್ಲ. ಜೊತೆಯಲ್ಲಿಯೇ ಯಾವುದೇ  ಬ್ಯಾಂಕ್ ಹಾಗೂ ಸೊಸೈಟಿಯಲ್ಲೂ ಲೋನ್ ದೊರಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



Previous Post Next Post