ಕೇಂದ್ರ ಸಚಿವ ಗಡ್ಕರಿರವರಿಗೆ ತೀರ್ಥಹಳ್ಳಿ ಬೈ ಪಾಸ್ ರಸ್ತೆಗೆ ಮನವಿ ಪತ್ರ ನೀಡಿದ ಆರಗ ಜ್ಞಾನೇಂದ್ರ Araga Jnanendra

ಕೇಂದ್ರ ಸಚಿವ ಗಡ್ಕರಿರವರಿಗೆ ತೀರ್ಥಹಳ್ಳಿ ಬೈ ಪಾಸ್ ರಸ್ತೆಗೆ ಮನವಿ ಪತ್ರ ನೀಡಿದ ಆರಗ ಜ್ಞಾನೇಂದ್ರ


ತೀರ್ಥಹಳ್ಳಿ : ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ತೀರ್ಥಹಳ್ಳಿ ತಾಲೂಕಿನ ತೀರ್ಥಹಳ್ಳಿ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಭಾನುಗೋಡಿನಿಂದ
ತೀರ್ಥಹಳ್ಳಿ ಆಗುಂಬೆ ರಾಷ್ಟ್ರೀಯ ಹೆದ್ದಾರಿಯನ್ನು ತೀರ್ಥಹಳ್ಳಿ ನಗರ ಸಂಪರ್ಕಿಸದೇ ಭಾನುಗೋಡು ಭಾರತೀಪುರ ಕಿತ್ತನಗದ್ದೆ ಮೂಲಕ ರಂಜದಕಟ್ಟೆ ಸಂಪರ್ಕಿಸುವ ಬೈಪಾಸ್ ರಸ್ತೆಗೆ ಅನುದಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಬೇಡಿಕೆ ಸಲ್ಲಿಸಿದರು.

ಈಗಾಗಲೇ ಕಳೆದ ಅವಧಿಯಲ್ಲಿ 8 ಕೋಟಿ ಮಂಜುರಾಗಿ ಕಾಮಗಾರಿ ಪ್ರಗತಿಯಲ್ಲಿದೆ, ಇನ್ನೂ ಹೆಚ್ಚಿನ ಅನುದಾನ ಬೇಕಾಗಿದ್ದು ಶಾಸಕ ಆರಗ ಜ್ಞಾನೇಂದ್ರರವರು ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮನವಿ ಪತ್ರ ನೀಡಿದರು.



Previous Post Next Post