ತೆಮ್ಮೆಮನೆ - ಹುರುಳಿ ರಸ್ತೆ ಅವಾಂತರ - ಜನಪ್ರತಿನಿದಿಗಳು, ಮೌನ - ಪ್ರತಿಭಟನೆ ಎಚ್ಚರಿಕೆ ನೀಡಿದ ಸ್ಥಳೀಯರು Road

ತೆಮ್ಮೆಮನೆ - ಹುರುಳಿ ರಸ್ತೆ ಅವಾಂತರ  - ಜನಪ್ರತಿನಿದಿಗಳು, ಮೌನ  - ಪ್ರತಿಭಟನೆ ಎಚ್ಚರಿಕೆ ನೀಡಿದ ಸ್ಥಳೀಯರು 
 


ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಂ ಪಂ ವ್ಯಾಪ್ತಿಯ ತೆಮ್ಮೆ ಮನೆ - ಹುರುಳಿ ರಸ್ತೆ ಹೊಂಡ ಗುಂಡಿಯಿಂದ ತುಂಬಿದ್ದು ವಾಹನಗಳು ಕೆಟ್ಟು ನಿಂತು ಸವಾರರು ಪರದಾಡುವಂತಾಗಿದೆ.


ಈ ಬಗ್ಗೆ ಜನಪ್ರತಿನಿದಿಗಳು ಹಾಗೂ ಸಂಬಂಧ ಇಲಾಖೆಯ ಗಾಢ ನಿದ್ರಾವಸ್ತೆಯಲ್ಲಿದ್ದು ರಸ್ತೆ ದುರಸ್ತಿ ಬಗ್ಗೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯವಾಗಿದೆ. ಈ ಹಿಂದೆ ಇದೆ ಗ್ರಾಮದ ಶಾಲೆಯಲ್ಲಿ ಶಾಲಾ ಹಂಚುಗಳು ಬಿದ್ದು ಸುದ್ದಿಯಾಗಿತ್ತು. ಆಗ ಸಹ ಶಾಸಕರಾದ ಆರಗ ಜ್ಞಾನೇಂದ್ರರವರು ಭೇಟಿ ನೀಡಿರಲಿಲ್ಲ. ಈಗ ರಸ್ತೆಯ ಅವ್ಯವಸ್ಥೆ, ಹೀಗೆ ಆದರೆ ನಮ್ಮ ಕಷ್ಟ ಯಾರ ಬಳಿ ಹೇಳುವುದು ಎಂದು ಸ್ಥಳೀಯರು ಹೇಳಿದ್ದಾರೆ.

ಇಷ್ಟಾದ ಮೇಲೂ ಸ್ಪಂದಿಸದೆ ಇದ್ದಲ್ಲಿ ರಸ್ತೆಗೆ ಗಿಡ ನೆಟ್ಟು ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಗೆ ನೀಡಿದ್ದಾರೆ.



Previous Post Next Post