ಕೆಸರುಗದ್ದೆ ಅಂತಾದ ಗ್ರಾಮದ ರಸ್ತೆ - ಪ್ರತಿನಿತ್ಯ ಪರದಾಡುತ್ತಿರುವ ಗ್ರಾಮಸ್ಥರು..! Tuduru

ಕೆಸರುಗದ್ದೆ ಅಂತಾದ ಗ್ರಾಮದ ರಸ್ತೆ - ಪ್ರತಿನಿತ್ಯ ಪರದಾಡುತ್ತಿರುವ ಗ್ರಾಮಸ್ಥರು..!

ತೀರ್ಥಹಳ್ಳಿ ತಾಲೂಕಿನ ತುದೂರು ಗ್ರಾಮದ ರಸ್ತೆಯ ಕಥೆ..!

ತೀರ್ಥಹಳ್ಳಿ : ಎರಡು ಕಿಲೋಮೀಟರ್ ನಷ್ಟು ಕೆಸರುಗದ್ದೆ ಅಂತಾದ ರಸ್ತೆಯಲ್ಲಿ ಪ್ರತಿನಿತ್ಯ ಗ್ರಾಮಸ್ಥರು ಓಡಾಟ ನಡೆಸಲು ಪರದಾಡುತ್ತಿರುವ ಘಟನೆ ತಾಲೂಕಿನ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲುಬಡಿಗೆ ಗ್ರಾಮದ ಸಣ್ಣಕರಿನ ಮನೆ ರಸ್ತೆಯದ್ದಾಗಿದೆ.


ಕನ್ನಂಗಿಯಿಂದ ಒಬ್ಬೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಪ್ರತಿನಿತ್ಯ ಮಕ್ಕಳು ಶಾಲೆಗೆ ಹೋಗಲು ಪರದಾಟ ನಡೆಸುತ್ತಿದ್ದಾರೆ. ಇದೇ ರಸ್ತೆ ಮೂಲಕ ಎರಡು ಕಿಲೋಮೀಟರ್ ನಷ್ಟು ದೂರ ಕೆಸರಿನಲ್ಲಿ ಮಕ್ಕಳು ಓಡಾಡುತ್ತಿದ್ದಾರೆ. ಕೇವಲ ಎರಡು ಕಿಲೋಮೀಟರ್ ರಸ್ತೆ ಮಾಡಿ ಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ
ಶಾಸಕರಾಗಲಿ ಅಥವಾ ಯಾವುದೇ ಅಧಿಕಾರಿಗಳಾಗಲಿ
ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆಯಲ್ಲಿ ವಾಹನಗಳನ್ನು ಸವಾರಿ ಮಾಡಲು ಸಾಧ್ಯವಾಗದೆ ದಬ್ಬಿಕೊಂಡು ಹೋಗುವ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.
ಪ್ರತಿಯೊಂದು ಬಾರಿ ಮಳೆಗಾಲದಲ್ಲಿ ಈ ಸಮಸ್ಯೆ ಆಗುತ್ತಿದೆ. 
ಯಾವುದೇ ಅಧಿಕಾರಿಗಳು ಈ ಬಗ್ಗೆ ಮಾತನಾಡುವುದಿಲ್ಲ.
ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



Previous Post Next Post