ತೀರ್ಥಹಳ್ಳಿಯಲ್ಲಿ ಕಾಳುಮೆಣಸು ಕೊಡುವುದಾಗಿ ಹೇಳಿ ಲಕ್ಷಗಟ್ಟಲೆ ವಂಚನೆ..!
ತೀರ್ಥಹಳ್ಳಿ : ಕಾಳುಮೆಣಸು ಪೂರೈಸುವುದಾಗಿ ನಂಬಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ರೂ 5.5 ಲಕ್ಷ ವಂಚನೆ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಕೋಣಂದೂರಿನ ಬಸವನ ಬೀದಿಯಲ್ಲಿ ಅಡಿಕೆ ಮಂಡಿ ನಡೆಸುತ್ತಿರುವ ಮಾಲೀಕರೊಬ್ಬರು ಕಳೆದ ಒಂದು ವರ್ಷದಿಂದ ಇಬ್ಬರು ವ್ಯಕ್ತಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಜುಲೈ 8 ರಂದು ಇಬ್ಬರು ಕಾಳುಮೆಣಸು ನೀಡುವುದಾಗಿ ಹೇಳಿ ಮಂಡಿ ಮಾಲೀಕರಿಂದ ಮುಂಗಡವಾಗಿ ಹಣ ಪಡೆದಿದ್ದಾರೆ. ಒಬ್ಬ ರೂ 2.5 ಲಕ್ಷ ಮತ್ತು ಇನ್ನೊಬ್ಬ ರೂ 2.5 ಲಕ್ಷ - ಹೀಗೆ ಒಟ್ಟು ₹5 ಲಕ್ಷ ಪಡೆದಿದ್ದಾರೆ ಎನ್ನಲಾಗಿದೆ
ಆದರೆ, ಹಣ ಪಡೆದ ನಂತರವೂ ಆರೋಪಿಗಳು ಕಾಳುಮೆಣಸು ಪೂರೈಸದೆ ಮತ್ತು ಹಣವನ್ನು ಸಹ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ ಎಂದು ಮಂಡಿ ಮಾಲೀಕರು ಆರೋಪಿಸಿದ್ದಾರೆ. ಈ ವಂಚನೆಯ ಕುರಿತು ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ