ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಗೆ ತೀರ್ಥಹಳ್ಳಿಯ ನಿತಿನ್ ಆಯ್ಕೆ KPL

ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಗೆ ತೀರ್ಥಹಳ್ಳಿಯ ನಿತಿನ್ ಆಯ್ಕೆ


ತೀರ್ಥಹಳ್ಳಿ : ದೇಶದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ
ಇಂಡಿಯನ್ ಪ್ರಿಮಿಯರ್ ಲೀಗ್  (IPL) ಆರಂಭವಾದಂತೆ
ಕರ್ನಾಟಕದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆರಂಭವಾಗಿ ಹಲವಾರು ವರ್ಷಗಳೇ ಕಳೆದಿದೆ. ಈಗ ಅಂತಹ ದೊಡ್ಡ ಲೀಗ್ ವೊಂದಕ್ಕೆ ತೀರ್ಥಹಳ್ಳಿಯ ಯುವ ಪ್ರತಿಭೆ ಆಯ್ಕೆಯಾಗಿದ್ದಾನೆ.

ಹೌದು  ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ  ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ಗ್ರಾಮದ ನಿತಿನ್ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆಯ್ಕೆ ಆಗಿದ್ದಾರೆ. ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡ ವಾದ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಕೆಪಿಎಲ್ ನಲ್ಲಿ ಚೆನ್ನಾಗಿ ಆಟವಾಡಿದರೆ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ.

ಕೆಪಿಎಲ್ ನಿಂದ ಐಪಿಎಲ್ ನತ್ತ ನಿತಿನ್ ಪಯಣ ಸಾಗಲಿ ಎಂದು ಶಿವಮೊಗ್ಗ ಸುದ್ದಿ ಹಾರೈಸುತ್ತದೆ..



Previous Post Next Post