ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಮುಖ್ಯಾಧಿಕಾರಿ ಭೇಟಿ..!
ಶಿವಮೊಗ್ಗ ಸುದ್ದಿ ವರದಿ ಬೆನ್ನಲ್ಲೇ ಸ್ಥಳಕ್ಕೆ ದೌಡು..!
ತೀರ್ಥಹಳ್ಳಿ : ಪಟ್ಟಣದ ಮುಖ್ಯ ಬಸ್ ನಿಲ್ದಾಣ ಮಳೆಗಾಲ ಆಗುತ್ತಿದ್ದಂತೆ ಸೋರುತ್ತಿದೆ ಎಂಬುದಾಗಿ ಶಿವಮೊಗ್ಗ ಸುದ್ದಿ ಬೆಳಗ್ಗೆ ವರದಿ ಮಾಡಿತ್ತು, ವರದಿ ಬೆನ್ನಲ್ಲೇ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು..
ಮಳೆಯ ನೀರು ಸಂಪೂರ್ಣ ನಿಲ್ದಾಣದ ಒಳಗೆ ನಿಲ್ಲುತ್ತಿದ್ದು
ಅದನ್ನು ತಪ್ಪಿಸಲು ಮೇಲ್ಚಾವಣಿ ಮೇಲ್ಭಾಗ ನೀರು ನಿಲ್ಲದಂತೆ ತಡೆಗಟ್ಟಲು ಹಾಗೂ ಕೇಳ ಭಾಗ ಸೊರದ ಹಾಗೆ ಏನೆಲ್ಲಾ ಮಾಡಬಹುದು ಎಂಬುದನ್ನು ಇಂಜಿನಿಯರ್ ಮೂಲಕ ಚರ್ಚೆ ನಡೆಸಿದರು. ಇನ್ನೆರಡು ದಿನದಲ್ಲಿ ತುರ್ತು ಕೆಲಸ ಆರಂಭಿಸುವುದಾಗಿ ಹೇಳಿದರು. ಇನ್ನು ಬಸ್ ನಿಲ್ದಾಣದ ಸುತ್ತ ಮುತ್ತಲಿನ ಜಾಗಕ್ಕೆ ಬ್ಲೀಚಿಂಗ್ ಪೌಡರ್ ಹಾಕುವಂತೆ, ಬಸ್ ನಿಲ್ದಾಣದ ಒಳಗಿದ್ದ ಟಿವಿ ಹಾಳಾಗಿದ್ದು ಅದನ್ನು ಸರಿಪಡಿಸುವಂತೆ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ವಾರ್ಡ್ ಸದಸ್ಯೆ ಜ್ಯೋತಿ ಗಣೇಶ್, ಮುಖ್ಯಾಧಿಕಾರಿ ನಾಗರಾಜ್, ಆರೋಗ್ಯಾಧಿಕಾರಿ ಜೆ. ಪ್ರಕಾಶ್, ಇಂಜಿನಿಯರ್ ಸತೀಶ್ ಸೇರಿ ಹಲವರು ಇದ್ದರು..
Tags:
ಫಲಶ್ರುತಿ ಸುದ್ದಿ