ಪಟ್ಟಣ ಪಂಚಾಯತ್ ನಲ್ಲಿ ಬಿ ಖಾತಾ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ನಿಮ್ಮ ಜಾಗಕ್ಕೆ ಈ ಸ್ವತ್ತು ಮಾಡಿಸುವಂತಹದ್ದು, ಇದು ಎಷ್ಟೋ ವರ್ಷಗಳ ಬೇಡಿಕೆ, ಬೇರೆಯವರಿಂದ ತೆಗೆದುಕೊಂಡರೆ ನಿವೇಶನಕ್ಕೆ ಬೆಲೆ ಸಿಗುತ್ತಾ ಇರಲಿಲ್ಲ. ಇ ಸ್ವತ್ತು ಕೊಡಬೇಕು ಎಂದು ಹಲವಾರು ಬಾರಿ ಹೋರಾಟ ಮಾಡಿದ್ದೆ, ಬಿ ಖಾತಾ ಪಡೆಯದಿದ್ದವರಿಗೆ ಕಷ್ಟ ಆಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು
ಮಂಗಳವಾರ ಪಟ್ಟಣ ಪಂಚಾಯತ್ ನಲ್ಲಿ ಬಿ ಖಾತಾ ವಿತರಿಸಿ ಮಾತನಾಡಿದ ಅವರು ಮನೆಯ ಸುತ್ತ ಒಂದು ಅಗ್ನಿಶಾಮಾಕ ದಳದ ವಾಹನ ಹೋಗುವಷ್ಟು ಜಾಗ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.
ಇವತ್ತು 140 ಜನ ಅರ್ಜಿ ಹಾಕಿದ್ದರು ಅದರಲ್ಲಿ 100 ಜನರಿಗೆ ಬಿ ಖಾತಾ ಹಂಚಿಕೆ ಮಾಡಲಾಗುತ್ತಿದೆ. ಇದು ನನಗೆ ಬಹಳ ಸಂತೋಷ ಉಂಟುಮಾಡಿದೆ ಎಂದರು.
ಪ್ರತಿಯೊಂದು ಮನೆಗೆ ಹಕ್ಕು ಪತ್ರ ಇರಲೇಬೇಕು. ಇತ್ತೀಚಿನ ದಿನಗಳಲ್ಲಿ ಹಕ್ಕುಪತ್ರಗಳನ್ನು ಫ್ರಾಡ್ ಮಾಡುತ್ತಾರೆ. ಜನರಿಗೆ ವಂಚಿಸಿ ಬೇರೆಯವರ ಹೆಸರಿಗೆ ಹಕ್ಕು ಪತ್ರ ಮಾಡಿಕೊಡುತ್ತಾರೆ. ಕಷ್ಟ ಪಟ್ಟು ಕಟ್ಟಿಕೊಂಡ ಮನೆಗೆ ಈಗ ಇರುವ ಪರಿಸ್ಥಿತಿ ಇಲ್ಲ. ಇ ಸ್ವತ್ತು ಮಾಡಿಸಿಕೊಂಡರೆ ಮನೆ ಹಾಗೂ ಸೈಟುಗಳಿಗೆ ಬೇಗ ಹಾಕಿದಂತೆ. ಯಾರಿಗೆಲ್ಲ ಬಿ ಖಾತಾ ಸಿಗುತ್ತದೋ ಆವರಿಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದರು.
ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಮಾತನಾಡಿ ಇದೊಂದು ಸರ್ಕಾರದ ಕಾರ್ಯಕ್ರಮ, ಶಾಸಕರು ಸಹ ತಾವು ಗೃಹಸಚಿವರಾಗಿದ್ದಾಗ ತುಂಬಾ ರೀತಿಯಲ್ಲಿ ಪ್ರಯತ್ನ ಪಟ್ಟರು ಆದರೆ ಅದು ಆಗಿರಲಿಲ್ಲ, ಈಗ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಬಿ ಖಾತಾ ಕೊಡಲು ತೀರ್ಮಾನಿಸಿದೆ. ಒಟ್ಟು ನೂರು ಮಂದಿಗೆ ಇಂದು ಇ ಸ್ವತ್ತು, ಬಿ ಖಾತಾ ನೀಡಲಾಗುತ್ತಿದೆ. ಅನಧಿಕೃತ ಇರುವ ಲೇ ಔಟ್ ನಲ್ಲಿದ್ದವರು ಸಹ ಅರ್ಜಿ ನೀಡಿ ಪರಿಶೀಲನೆ ಮಾಡಿಕೊಳ್ಳಿ, ಇಲ್ಲದಿದ್ದರೆ ಮುಂದೆ ತೊಂದರೆ ಆಗುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ ಶಬನಮ್, ಜ್ಯೋತಿ ಗಣೇಶ್, ರತ್ನಾಕರ್ ಶೆಟ್ಟಿ, ಬಿ ಗಣಪತಿ, ಸೇರಿ ಹಲವರು ಉಪಸ್ಥಿತರಿದ್ದರು.