ತೀರ್ಥಹಳ್ಳಿಯ ಬಿ ಆರ್ ಸಿ ಕಟ್ಟಡಕ್ಕೆ ಡಿಡಿಪಿಐ ಮಂಜುನಾಥ್ ಭೇಟಿ - ಶೀಘ್ರದಲ್ಲಿ ಕಟ್ಟಡ ಸರಿಪಡಿಸುವುದಾಗಿ ಹೇಳಿಕೆ BIG IMPACT

ತೀರ್ಥಹಳ್ಳಿಯ ಬಿ ಆರ್ ಸಿ ಕಟ್ಟಡಕ್ಕೆ ಡಿಡಿಪಿಐ ಮಂಜುನಾಥ್ ಭೇಟಿ - ಶೀಘ್ರದಲ್ಲಿ ಕಟ್ಟಡ ಸರಿಪಡಿಸುವುದಾಗಿ ಹೇಳಿಕೆ

ಶಿವಮೊಗ್ಗ ಸುದ್ದಿ  ವರದಿಯ ಫಲಶ್ರುತಿ


ತೀರ್ಥಹಳ್ಳಿ : ಕ್ಷೇತ್ರ ಸಂಪನ್ಮೂಲ ಕಟ್ಟಡ ಸಂಪೂರ್ಣ ಸೋರುತ್ತಿರುವುದಾಗಿ ಹಾಗೂ ಅಲ್ಲಿನ ಅಧಿಕಾರಿಗಳು ಅದರಲ್ಲೇ ಕೆಲಸ ನಿರ್ವಹಿಸುತ್ತಿರುವುದಾಗಿ ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಇಂದು ಡಿಡಿಪಿಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ ಸುದ್ದಿ ವರದಿಯಾದ ಮರುದಿನವೇ ಇಂಜಿನಿಯರ್ ಗಳು ಭೇಟಿ ನೀಡಿದ್ದರು. ಇಂದು ಶಿವಮೊಗ್ಗದಿಂದ  ಡಿಡಿಪಿಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ಸುದ್ದಿ ಜೊತೆಗೆ ಮಾತನಾಡಿದ ಅವರು ಸರಿ ಸುಮಾರು 17 ಲಕ್ಷ ವೆಚ್ಚದಲ್ಲಿ
ಕಟ್ಟಡದ ಮೇಲ್ಭಾಗ ಶೀಟ್ ಹಾಗೂ ಕಟ್ಟಡಕ್ಕೆ ಸುಣ್ಣ ಬಣ್ಣ ಮತ್ತು ಹೊಸದಾಗಿ ಕಿಟಕಿ ಬಾಗಿಲು ಹಾಕಲಾಗುತ್ತದೆ. ಶೀಘ್ರದಲ್ಲಿ ಈ ಕೆಲಸ ಆರಂಭವಾಗುತ್ತದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಮೂರು ವರ್ಷಗಳಿಂದ ಪಾಳು ಬಿದ್ದಂತೆ ಇದ್ದಂತಹ
ಕಟ್ಟಡಕ್ಕೆ ಈಗ ಮರು ಜೀವ ಬರುವಂತೆ ಕಾಣಿಸುತ್ತಿದ್ದು
ಕಟ್ಟಡಕ್ಕೆ ಹೊಸ ರೂಪ ಕೊಡುತ್ತಾರ? ಕಾದು ನೋಡಬೇಕಿದೆ

Previous Post Next Post