ತೀರ್ಥಹಳ್ಳಿಯ ಮಕ್ಕಳ ವೈದ್ಯ ಡಾ. ಪ್ರಭಾಕರ್ ವರ್ಗಾವಣೆ..!
ಆಸ್ಪತ್ರೆ ಎದುರು ನಾಳೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಭಟನೆ..!
ತೀರ್ಥಹಳ್ಳಿ : ಜನಪ್ರಿಯ ಮಕ್ಕಳ ವೈದ್ಯರಾಗಿದ್ದ ಡಾ. ಪ್ರಭಾಕರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲ ಉತ್ತಮ ಕಾರ್ಯ ನಿರ್ವಹಿಸಿ ತಾಲೂಕಿನಲ್ಲದೆ ಅಕ್ಕ ಪಕ್ಕದ ತಾಲೂಕಿನಲ್ಲೂ ಅತ್ಯುತ್ತಮ ವೈದ್ಯರೆಂದೆ ಮನೆ ಮಾತಾದ ಹಾಗೂ ಮಕ್ಕಳ ಪ್ರೀತಿ ಪಾತ್ರ ವೈದ್ಯರಾಗಿದ್ದ ಡಾ. ಪ್ರಭಾಕರ್ ಅವರು ತೀರ್ಥಹಳ್ಳಿಯಿಂದ ಕೊಪ್ಪ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ.
ಇವರು ವೈದ್ಯ ವೃತ್ತಿಯ ಜೊತೆಗೆ ಹವ್ಯಾಸಿಯಾಗಿ ಛಾಯಾಚಿತ್ರ ಗ್ರಾಹಕರಾಗಿ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದ ಚಿತ್ರಗಳು ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಲ್ಲದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರ ಛಾಯಾಚಿತ್ರದ ವಿಷಯದಲ್ಲಿ ಹೆಸರುಗಳಿಸಿದ್ದರು. ಹಾಗೆಯೇ ಪಕ್ಷಿ ಪ್ರಿಯರು ಮತ್ತು ಉರಗ ಪ್ರಿಯರು ಹೌದು...
ಒಮ್ಮೆ ಜಯಚಾಮರಾಜೇಂದ್ರ ಆಸ್ಪತ್ರೆಯ ಇವರ ಕೊಠಡಿಯಲ್ಲಿ ವಿನಾಶ ಅಂಚಿನಲ್ಲಿರುವ ಗುಬ್ಬಿಯೊಂದು ಫ್ಯಾನ್ ನಲ್ಲಿ ಗೂಡು ಕಟ್ಟುತ್ತಿರುವುದನ್ನು ಗಮನಿಸಿ ಗುಬ್ಬಿ ಹಕ್ಕಿಗೆ ತೊಂದರೆ ಆಗುತ್ತದೆ ಎಂದು ರೋಗಿಗಳಿಗೆ ಕೊಠಡಿ ಹೊರ ಭಾಗದಲ್ಲಿ ತಪಾಸಣೆ ಮಾಡಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಈಗ ಏಕಾಏಕಿ ಡಾ. ಪ್ರಭಾಕರ್ ಅವರನ್ನು ವರ್ಗಾವಣೆ ಮಾಡಿದ್ದು ಇದನ್ನು ತೀರ್ಥಹಳ್ಳಿ ಜನರು ಖಂಡಿಸಿದ್ದು ನಾಳೆ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.
Tags:
ಆಸ್ಪತ್ರೆ