ಆಗುಂಬೆ ಸಮೀಪ ಬಾವಿಗೆ ಹಾರಿ ವ್ಯಕ್ತಿ ಸಾವು..!
ತೀರ್ಥಹಳ್ಳಿ : ಮನನೊಂದು ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗುಂಬೆ ಸಮೀಪದ ಕೌರಿಹಕ್ಲುವಿನಲ್ಲಿ ನಡೆದಿದೆ.
ಕರುಣಾಕರ ( 63 ವರ್ಷ ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೌರಿಹಕ್ಲುವಿನ ಹುಲಕೊಡು ಬಳಿ ವಾಸ ಮಾಡುತ್ತಿದ್ದ ಅವರು ನಿನ್ನೆ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
ಆತ್ಮಹತ್ಯೆ ಸುದ್ದಿ