ಮೊಗವೀರ ಸಮಾಜದ ಅಧ್ಯಕ್ಷರಾಗಿ ಶ್ರೀನಿವಾಸ್ ಅಯ್ಕೆ..!tth

ಮೊಗವೀರ ಸಮಾಜದ ಅಧ್ಯಕ್ಷರಾಗಿ ಶ್ರೀನಿವಾಸ್ ಅಯ್ಕೆ..!
ತೀರ್ಥಹಳ್ಳಿ :  ಮೊಗವೀರ ಸಮಾಜದ ಮಾಧವ ಮಂಗಲ ಸಭಾಭವನದಲ್ಲಿ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ  ಭಾನುವಾರದಂದು   ಮಹಾಲಕ್ಷ್ಮಿ ಸಭಾಭವನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ನಂತರ ಸರ್ವ ಸದಸ್ಯರ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು ಹಾಗೂ ಸಭಾಭವನದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಖ್ಯಾತ ವಾಗ್ಮಿಗಳಾದ ಶ್ರೀ ದಾಮೋದರ ಶರ್ಮಾ ಅವರಿಂದ "ಭಾವ ಬೆಳಕು ಬೆಳಗಲಿ" ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಕೂಡ ನಡೆಯಿತು.

ಈ ಕಾರ್ಯಕ್ರಮದಲ್ಲಿ "ನಾಡೋಜ ಡಾಕ್ಟರ್ ಜಿ ಶಂಕರ್" ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಂಘದ  ಜಯಾ ಸಿ. ಕೋಟ್ಯಾನ್" ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು,  ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ "ಜಯಂತ್ ಅಮೀನ್"  ಉಪಸ್ಥಿತರಿದ್ದರು,

ಈ ಸಂಧರ್ಭ ಸಮಾಜದಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಂತಹವರನ್ನು ಗುರುತಿಸಿ ಗೌರವ ಸಮರ್ಪಣೆ ಮಾಡಿದರು

 ಅತಿ ಹೆಚ್ಚು ಅಂಕಗಳನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ "ಪ್ರತಿಭಾ ಪುರಸ್ಕಾರ" ಕಾರ್ಯಕ್ರಮ, ಹಾಗೂ "ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ" ಮತ್ತು ಸಮಾಜ ಬಾಂಧವರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರು ಮತ್ತು ತೀರ್ಥಹಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಾದಂತಹ ಎಂ ಐ ಓ ಕ್ಯಾನ್ಸರ್ ಆಸ್ಪತ್ರೆಯಲ್ಲಿ  "ಆರೋಗ್ಯ ವಿಮಾ ಕಾರ್ಡನ್ನು" ಮಾಡಿಸಲಾಯಿತು. 

ಮಧ್ಯಾಹ್ನದ  ಸರ್ವ ಸದಸ್ಯರ ಸಭೆ ನಡೆಯಿತು..ಈ ಸಭೆಯಲ್ಲಿ ಮುಂದಿನ ಅವಧಿಗೆ ಹೊಸ ಅಧ್ಯಕ್ಷರಾಗಿ ಸುಮಾರು ನಲವತ್ತು ದಶಕಗಳ ಕಾಲ ಸಮಾಜದ ಎಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿ ಎಲ್ಲೂ ಕೂಡ ಪ್ರಚಾರ ಬಯಸದ ಸೂಕ್ತ ವ್ಯಕ್ತಿಯಾದ ಶ್ರೀನಿವಾಸ್ ಬಾಳೇಬೈಲ್ ಅವರನ್ನು ಆಯ್ಕೆ ಮಾಡಿದರು



 
Previous Post Next Post