ಕಾನ್ಪುರ್ ಐಐಟಿ ಗೆ ಆಯ್ಕೆಯಾದ ಸುಶಾಂತ್ ಪ್ರಭು ಗೆ ಸನ್ಮಾನಿಸಿದ ಶಾಸಕ ಆರಗ ಜ್ಞಾನೇಂದ್ರ Araga Jnanendra

ಕಾನ್ಪುರ್ ಐಐಟಿ ಗೆ ಆಯ್ಕೆಯಾದ ಸುಶಾಂತ್ ಪ್ರಭು ಗೆ ಸನ್ಮಾನಿಸಿದ ಶಾಸಕ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ತೀರ್ಥಹಳ್ಳಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ, ಇಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿ ಕಾನ್ಪುರ ಐಐಟಿ ಗೆ ಹೋಗುತ್ತಿರುವ ತೀರ್ಥಹಳ್ಳಿ ತಾಲೂಕಿನ ಮೊದಲ ವ್ಯಕ್ತಿ ಸುಶಾಂತ್ ಆಗಿದ್ದಾರೆ. ಅವರ ಪೋಷಕರಿಗೆ, ಶಿಕ್ಷಕರಿಗೆ ಇದೊಂದು ಕೀರ್ತಿ ತರುವ ವಿಷಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಶಾಸಕರ ಕಚೇರಿಯಲ್ಲಿ ಸುಶಾಂತ್ ಪ್ರಭುಗೆ ಸನ್ಮಾನಿಸಿ ಮಾತನಾಡಿದ ಅವರು ಐಎಎಸ್, ಐಪಿಎಸ್, ಮಿಲ್ಟ್ರಿ, ಯವರು ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಗೋವಾ ಮಾಜಿ ಮುಖ್ಯಮಂತ್ರಿ ಪಡೀಕರ್ ಅವರು ಅಲ್ಲಿ ಓದಿದ್ದರು. ಈಗ ನಮ್ಮ ಊರಿನ ವಿದ್ಯಾರ್ಥಿ ಐಐಟಿಯಲ್ಲಿ ಓದಲು ಹೋಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ನಾನು ಮಾಡಿರುವ ಸನ್ಮಾನ ಈತನಿಗೆ ಹಾಗೂ ಈತನನ್ನು ನೋಡಿ ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗಲಿ, ನಾನೊಬ್ಬ ಶಾಸಕನಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಬೆನ್ನು ತಟ್ಟುವುದು ನಮ್ಮ ಕರ್ತವ್ಯ. ಈಗಾಗಲೇ ತಾಲೂಕಿನ ಎಸ್ಎಸ್ಎಲ್ ಸಿ, ಪಿ ಯು ಸಿ ಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಸಾಧನೆ ನೋಡಿ ನಮಗೆ ನಿಜವಾಗಿಯೂ ಸಂತೋಷವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಆರ್ ಎಸ್ ಬಿ ಸಮಾಜದ ಹಿರಿಯರಾದ ನಟರಾಜ್ ಕಾಮತ್, ಪ.ಪಂ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್ ಸೇರಿ ಹಲವರು ಉಪಸ್ಥಿತರಿದ್ದರು.





Previous Post Next Post