ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ - ಆದರೆ ಶೌಚಾಲಯ ಮಾತ್ರ ಮುಚ್ಚಿದಂತೆ..!
ನೂರಾರು ಮಕ್ಕಳು - ಒಂದೇ ಶೌಚಾಲಯ ಇದು ಸರ್ಕಾರಿ ಶಾಲೆಯ ಅವ್ಯವಸ್ಥೆ ಕಥೆ..!
ತೀರ್ಥಹಳ್ಳಿ : ಈಗ ರಾಜ್ಯದಲ್ಲಿ ಇರುವ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತ ಭಾಗ್ಯಗಳನ್ನು ನೀಡಿದೆಯೋ ಹಾಗೆ ಕೆಲವು
ಅವ್ಯವಸ್ಥೆ ಕೂಡ ನೀಡಿದೆ. ಸರ್ಕಾರಿ ಶಾಲೆಯಲ್ಲಿ ಮೊದಲು ಕಾಣಿಸುವುದೇ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗೋಡೆ ಬರಹ ಆದರೆ ಈಗ ಆದರ ಜೊತೆಗೆ ಶೌಚಾಲಯ ಮಾತ್ರ ಮುಚ್ಚಿದಂತೆ..! ಎಂಬ ಬರಹ ಹಾಕಿಸುವುದು ಒಳ್ಳೆಯದು ಎಂಬ ಮಾತು ಮಹಿಳಾ ಪೋಷಕರಿಂದ ಕೇಳಿ ಬಂದಿದೆ
ಇತ್ತೀಚಿಗೆ ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ, ಊಟ, ಪುಸ್ತಕ ಎಲ್ಲವು ನೀಡುವುದು ಸತ್ಯ ಆದರೆ ಅಲ್ಲಿನ ಮೂಲಭೂತ ಸೌಕರ್ಯ ಮಾತ್ರ ಯಾರು ನೋಡಲು ಬರುವುದಿಲ್ಲ, ಬಂದರೂ ಸಹ ತಲೆ ಸವರಿ ನಾವು ಮಾಡುತ್ತೇವೆ ಎಂಬ ಮಾತು ಹೇಳಿ ಹೋಗುತ್ತಾರೆ. ಅವರು ಶೌಚಾಲಯದ ಕೆಲಸ ಮಾಡುವಾಗ ಬಹುಶಃ ಅಲ್ಲಿ ಓದುವ ಮಕ್ಕಳು ಶಾಲೆ ಮುಗಿಸಿದರು ಅಚ್ಚರಿಯಿಲ್ಲ. ಶಾಲೆಗೆ ಮೂಲಭೂತ ಸೌಕರ್ಯ ಕೊಡದ ಮೇಲೆ ನಂದು ಎಂದು ಬಡಾಯಿ ಕೊಚ್ಚಿಕೊಳ್ಳುವುದು ಯಾಕೆ? ಎಂಬ ಆಕ್ರೋಶವನ್ನು ಮಹಿಳಾ ಪೋಷಕರೊಬ್ಬರು ತಿಳಿಸಿದ್ದಾರೆ.
ಸರ್ಕಾರಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಬೇಕಂತೆ..!
ಒಂದು ಕಟ್ಟಡ ನಿರ್ಮಾಣ ಮಾಡಲು ಬಹು ಮುಖ್ಯವಾಗಿ ಬೇಕಾಗುವುದು ಮರಳು. ಆದರೆ ಅದನ್ನು ಸರ್ಕಾರಿ ಶಾಲೆಗೆ ನೀಡಬೇಕು ಎಂದರು ಹಲವಾರು ಕಾನೂನು ಅಡಚಣೆಗಳು ಬರುತ್ತವೆ. ಆದರೆ ಅದೇ ಮರಳನ್ನು ಒಂದೇ ಬಿಲ್ ನಲ್ಲಿ ಹತ್ತಾರು ಟ್ರಿಪ್ ಹೊಡೆದರೂ ಕಾನೂನಿನ ಕಣ್ಣಿಗೆ ಕಾಣಿಸುವುದಿಲ್ಲ ಕಾರಣ ಆ ಟ್ರಿಪ್ ಜಾಲಿ ಟ್ರಿಪ್ ಆಗಿರುತ್ತದೆ.
ಸರ್ಕಾರಿ ಶಾಲೆಯಲ್ಲಿ ಕೆಲಸ ಆಗಬೇಕು ಎಂದರೆ ಅದಕ್ಕೆ ಟೆಂಡರ್ ಕರಿಯಬೇಕು, ಅಷ್ಟು ಸುಲಭವಾಗಿ ಆಗುವುದಿಲ್ಲ, ಸಮಯ ಬೇಕು, ಎನ್ನುತ್ತಾರೆ. ಇವರು ಮಾತನಾಡುವುದು ನೋಡಿದರೆ ಈ ವರ್ಷಕ್ಕೆ ಶಾಲೆಗೆ ಮೂಲಭೂತ ಸೌಕರ್ಯ ಆಗುವ ತರವಿಲ್ಲ ಎಂದರು.
ಇನ್ನು ಈಗ ಮಳೆಗಾಲವಾಗಿದ್ದು ಗಂಟೆಗೊಮ್ಮೆ ಶೌಚಾಲಯಕ್ಕೆ ಹೋಗಬೇಕು ಎನಿಸುವುದು ಎಲ್ಲರಿಗೂ ಆಗುತ್ತದೆ. ಆದರೆ ಒಂದೇ ಶೌಚಾಲಯ ಇರುವುದರಿಂದ ಮಕ್ಕಳು ಗಂಟೆಗಟ್ಟಲೆ ಕಾಯುವುದು ನೋಡಿದರೆ ಬೇಸರವಾಗುತ್ತದೆ ಎಂದರು..
Tags:
ತೀರ್ಥಹಳ್ಳಿ ಸುದ್ದಿ