ತೀರ್ಥಹಳ್ಳಿ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ
ತೀರ್ಥಹಳ್ಳಿ : ತಾಲೂಕಿನ ರೈತ ಬಾಂಧವರಿಗೆ ತೋಟಗಾರಿಕೆ ಇಲಾಖೆ, ಕುಶಾವತಿ - ತೀರ್ಥಹಳ್ಳಿ ಕಚೇರಿಯಿಂದ ಈ ಕೆಳಗಿನ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯವನ್ನು ಪಡೆಯಲು ಎಲ್ಲಾ ವರ್ಗದ ರೈತರಿಂದ ಅರ್ಜಿಗಳನ್ನು ಕರೆಯಲಾಗಿದೆ. ಸಹಾಯಧನ ಸೌಲಭ್ಯದ ವಿವರ ಕೆಳಗಿನಂತಿದೆ.
1) ಅಡಿಕೆ ಕೊಳೆರೋಗ ನಿರ್ವಹಣೆಗೆ ಮೈಲುತುತ್ತವನ್ನು ಖರೀದಿಸಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
2) ಹನಿ ನೀರಾವರಿ ಘಟಕವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿ ಸಹಾಯಧನವನ್ನು ಪಡೆಯಲು ಈಗ ಅರ್ಜಿ ಸಲ್ಲಿಸಬಹುದು.
3) ಮದುವನ ಮತ್ತು ಜೇನು ಸಾಕಾಣಿಕೆ ಯೋಜನೆ ಅಡಿ ಮುಂದಿನ ದಿನಗಳಲ್ಲಿ ಜೇನು ಪೆಟ್ಟಿಗೆ ಹಾಗೂ ಜೇನು ಕುಟುಂಬವನ್ನು ಖರೀದಿಸಿ ಸಹಾಯಧನ ಪಡೆಯಲು ಈಗ ಅರ್ಜಿ ಸಲ್ಲಿಸಬಹುದು.
4) ಮದುವನ ಮತ್ತು ಜೇನು ಸಾಕಾಣಿಕೆ ಯೋಜನೆ ಅಡಿ ಮುಂದಿನ ದಿನಗಳಲ್ಲಿ ಮದುವನ ಸ್ಥಾಪನೆ ಮಾಡಿ ಸಹಾಯಧನ ಪಡೆಯಲು ಈಗ ಅರ್ಜಿಯನ್ನು ಸಲ್ಲಿಸಬಹುದು.
ಮೇಲಿನ ಎಲ್ಲ ಯೋಜನೆಗಳಿಗೆ ಸಹಾಯಧನ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು
ಅಂತಿಮ ದಿನಾಂಕ 05/07/2025 ಆಗಿರುತ್ತದೆ.
Tags:
ತೋಟಗಾರಿಕೆ ಇಲಾಖೆ