ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ; ಸಚಿವ ಜಮೀರ್ ರಾಜೀನಾಮೆ ಕೊಡ್ಬೇಕು! ಬೇಳೂರು ಗೋಪಾಲಕೃಷ್ಣ ಶಾಕಿಂಗ್ ಹೇಳಿಕೆ Beluru Gopalakrishna

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ; ಸಚಿವ ಜಮೀರ್ ರಾಜೀನಾಮೆ ಕೊಡ್ಬೇಕು! ಬೇಳೂರು ಗೋಪಾಲಕೃಷ್ಣ ಶಾಕಿಂಗ್ ಹೇಳಿಕೆ
ಶಿವಮೊಗ್ಗ : ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದೆ ಎನ್ನುವ ಸ್ವಪಕ್ಷದವರ ಆರೋಪ  ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ. ಒಬ್ಬರೇ ಶಾಸಕರು ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್​ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವ ಜಮೀರ್ ಅಹ್ಮದ್​ ಖಾನ್ ರಾಜೀನಾಮೆ ಕೊಡ್ಬೇಕು ಎನ್ನುತ್ತಾ ಹೊಸ ಬಾಂಬ್ ಸಿಡಿಸಿದ್ದಾರೆ. 

ಶಿವಮೊಗ್ಗದಲ್ಲಿ ಮಾತಾಡಿದ ಅವರು ವಸತಿ ಯೋಜನೆ ಬಗ್ಗೆ ಆರೋಪ ಬಂದಿರೋದನ್ನ ನೀವು ಕೇಳಿದ್ದೀರಿ. ಕಾಂಗ್ರೆಸ್​ನ ಹಿರಿಯ ಸದಸ್ಯರೊಬ್ಬರು ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡ್ಬೇಕು ಎಂದಿದ್ದಾರೆ.
ಜಮೀರ್ ಖಾನ್ ರಾಜೀನಾಮೆ ಕೊಡ್ಬೇಕು
ತನಿಖೆ ನಡೆದು, ಸತ್ಯಾಂಶ ಹೊರ ಬರುವವರೆಗೂ ಸಚಿವ ಜಮೀರ್ ಖಾನ್ ರಾಜೀನಾಮೆ ಕೊಡುವುದು ಉತ್ತಮ  
ಆರೋಪ ಬಂದಿದೆ ರಾಜೀನಾಮೆ ಕೊಡಲಿ, ತನಿಖೆ ಮುಗಿದ ನಂತರ ಬೇಕಾದ್ರೆ ಮತ್ತೆ ಮಂತ್ರಿ ಆಗಲಿ ಎಂದು ಸಾಗರದ ಶಾಸಕ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ಬೇರೆ ಬೇರೆ ಹಗರಣಗಳಲ್ಲೂ ಆರೋಪಗಳು ಕೇಳಿ ಬರ್ತಿದ್ದಂತೆ ಅನೇಕರು ರಾಜೀನಾಮೆ ಕೊಟ್ಟ ಉದಾಹರಣೆ ಕೂಡ ಇದೆ. ಅವರು ತಪ್ಪಿತಸ್ಥರಲ್ಲ ಎಂದ ತಕ್ಷಣ ಮತ್ತೆ ಅಧಿಕಾರ ತೆಗೆದುಕೊಳ್ಳುವ ಅವಕಾಶ ಇದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.





Previous Post Next Post