ಈ ಬಾರಿ ದಸರಾಕ್ಕೆ ನಿರ್ಮಾಣವಾಗುತ್ತ ಮಹಾದ್ವಾರ..!? Thirthahalli Dasara

ಈ ಬಾರಿ ದಸರಾಕ್ಕೆ ನಿರ್ಮಾಣವಾಗುತ್ತ ಮಹಾದ್ವಾರ..!?

ಕಳೆದ ಬಾರಿ ಆಂಜನೇಯ..!  ಈ ಬಾರಿ ಆಪರೇಷನ್ ಸಿಂಧೂರ..!?
ತೀರ್ಥಹಳ್ಳಿ : ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಜಂಬುಸವಾರಿ ಅತ್ಯಂತ ವೈಭವದಿಂದ ನಡೆದರೆ ಎರಡನೇ ಮೈಸೂರು ಎಂದೇ ಖ್ಯಾತಿ ಪಡೆದಿದ್ದ ತೀರ್ಥಹಳ್ಳಿಯಲ್ಲೂ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೈಭವದಿಂದ ದಸರಾ ಆಚರಿಸಲಾಗುತ್ತಿದೆ.


ಈ ಬಾರಿ ಸಹ ವಿಜೃಂಭಣೆ ಯಿಂದ ಆಚರಿಸಲಾಗುತ್ತದೆ ಎಂಬ ಮಾಹಿತಿ  ಈಗಾಗಲೇ ಲಭ್ಯವಾಗಿದ್ದು ಕಳೆದ ಬಾರಿಯಂತೆ ಈ ಬಾರಿ ಸಹ ಕೊಪ್ಪ ಸರ್ಕಲ್ ನಲ್ಲಿ ಮಹಾದ್ವಾರ ನಿರ್ಮಾಣ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿ ಆಂಜನೇಯನ ಹೆಗಲ ಮೇಲೆ ಶ್ರೀ ರಾಮ ಇದ್ದಂತಹ ಮಹಾದ್ವಾರ ನಿರ್ಮಾಣ ಮಾಡಲಾಗಿತ್ತು. ದಸರಾ ಕ್ಕೂ ಮೊದಲೇ ಈ ವಿಚಾರ ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು. ಈಗ ಸಹ ಅದೇ ರೀತಿಯಲ್ಲಿ ಮಹಾದ್ವಾರ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ಮೂಲಗಳ ಪ್ರಕಾರ ಈ ಬಾರಿ ಪಾಕಿಸ್ತಾನವನ್ನು ಯುದ್ಧದ ಮೂಲಕ ಬೆಂಡೆತ್ತಿದ ಯೋಧರನ್ನು ಸ್ಮರಿಸುವ ಸಲುವಾಗಿ
ಆಪರೇಷನ್ ಸಿಂಧೂರ ಹೆಸರಿನಲ್ಲೇ ಕೊಪ್ಪ ಸರ್ಕಲ್ ನಲ್ಲಿ ಮಹಾದ್ವಾರ ನಿರ್ಮಾಣ ಆಗುವ ಸಾಧ್ಯತೆ ಇದೆ. ಹಾಗೇನಾದರು ಈ ಬಾರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ
ಮಹಾದ್ವಾರ ನಿರ್ಮಾಣ ಆದರೆ ತೀರ್ಥಹಳ್ಳಿ ದಸರಾಕ್ಕೆ ಮತ್ತೊಂದು ಮೈಲಿಗಲ್ಲು ಬಂದಂತೆ ಆಗುತ್ತದೆ. ಇನ್ನು ಎರಡು ತಿಂಗಳು ಬಾಕಿ ಇದ್ದು ದಸರಾಕ್ಕೆ ಈ ಬಾರಿ ಏನೆಲ್ಲಾ ಆಗುತ್ತದೆ ಕಾದು ನೋಡಬೇಕಿದೆ.





Previous Post Next Post