ನೊಣಕ್ಕಾಗಿ ಗಲಾಟೆ - ಕೈ ಕೈ ಮಿಲಾಯಿಸಿದ ಇಬ್ಬರು ವ್ಯಕ್ತಿಗಳು..! Konanduru

ನೊಣಕ್ಕಾಗಿ ಗಲಾಟೆ - ಕೈ ಕೈ ಮಿಲಾಯಿಸಿದ ಇಬ್ಬರು ವ್ಯಕ್ತಿಗಳು..!
ತೀರ್ಥಹಳ್ಳಿ : ನೊಣದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗ್ರಾಮಪಂಚಾಯಿತಿ ಎದುರಿಗೆ ಕೈ ಕೈ ಮಿಲಾಯಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ  ಎದುರು ನಮ್ಮ ಮನೆಯಲ್ಲಿ ನೊಣ ಜಾಸ್ತಿ ಆಗಿದೆ. ಇದಕ್ಕೆ ಕಾರಣ ಅಲ್ಲಿನ ಜಾಗವೊಂದರಿಂದ ನೊಣ ಹರಡುತ್ತಿದೆ. ಇದರಿಂದಾಗಿ ನಮ್ಮ ಮನೆಗೆ ಹಾಗೂ ಅಕ್ಕ ಪಕ್ಕದವರಿಗೆ ತೊಂದರೆ ಆಗುತ್ತಿದೆ ಇದನ್ನು ಸರಿಪಡಿಸಿ ಎಂದು ಗ್ರಾಮಪಂಚಾಯಿತಿ ಎದುರಿಗೆ ಬಂದು ವ್ಯಕ್ತಿಯೋರ್ವ ದೂರು ನೀಡಿದ್ದಾನೆ.

ಈತ ದೂರು ನೀಡಿದ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬ ಎದುರು ಬದರು ಆಗಿದ್ದಾರೆ. ಅಲ್ಲಿಯೇ ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರು ಕೈ ಕೈ ಮಿಲಾಯಿಸಿ ಕೊಂಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರಿಂದ ಮಾತು ಕೇಳಿ ಬಂದಿದೆ.  

ನೊಣ ಬರಲು ಕಾರಣವೇನು??

ಮಳೆಗಾಲ ಬಂತೆಂದರೆ ಸ್ನಾನ ಗೃಹದಲ್ಲಿ, ಅಡಿಗೆ ಮನೆಯಲ್ಲಿ, ಕೊಟ್ಟಿಗೆಯಲ್ಲಿ, ಮತ್ತು ಕೊಳಚೆ ಪ್ರದೇಶದಿಂದ ನೊಣಗಳು ವಿಪರೀತ ಉತ್ಪತ್ತಿಯಾಗಿ ಮನೆಗಳ ಮೇಲೆ ದಾಳಿ ಇಡುತ್ತವೆ. ಇದರಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಆದರೆ ಈ ಭಾಗದಲ್ಲಿ  ವಿಪರೀತ ನೊಣಗಳು ಕಂಡು ಬಂದು ಸಾರ್ವಜನಿಕರಿಂದ ದೂರು ಬಂದರು ಸಹ ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಆಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಮೌನ ವಹಿಸಿರುವ ಹಿಂದಿನ ಮರ್ಮವೇನು? ಎಂಬುದು ತಿಳಿಯಬೇಕಿದೆ.



Previous Post Next Post