ಶಿವಮೊಗ್ಗದಲ್ಲಿ ಅಂತರ್ ರಾಜ್ಯ ಕಳ್ಳನ ಕಾಲಿಗೆ ಗುಂಡೇಟು! Thif

ಶಿವಮೊಗ್ಗದಲ್ಲಿ ಅಂತರ್ ರಾಜ್ಯ ಕಳ್ಳನ ಕಾಲಿಗೆ ಗುಂಡೇಟು!

ಶಿವಮೊಗ್ಗ: ಅಂತರ ರಾಜ್ಯ ಕಳ್ಳನೊಬ್ಬನ  ಕಾಲಿಗೆ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅಂತರ ರಾಜ್ಯ ಕಳ್ಳ ಮಂಜುನಾಥ್‌ ಅಲಿಯಾಸ್‌ ಕಲ್ಕೆರೆ ಮಂಜು ಎಂಬಾತನ ಕಾಲಿಗೆ ಇಂದು ಬೆಳಗ್ಗೆ ಗುಂಡು ಹಾರಿಸಲಾಗಿದೆ.

ಎರಡು- ಮೂರು ದಿನದಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಲಭಿಸಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ಸಂದರ್ಭ ಪೊಲೀಸ್‌ ಸಿಬ್ಬಂದಿ  ಮೇಲೆ ಮಂಜ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಆತ್ಮರಕ್ಷಣೆಗಾಗಿ ಜಯನಗರ ಪಿಎಸ್‌ಐ ನವೀನ್‌ ಬ್ಯಾಕೋಡು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಕಲ್ಕೆರೆ ಮಂಜನ ಕಾಲಿಗೆ ಗುಂಡು ಹೊಡೆದಿದ್ದಾರೆ. ಮಂಜನ ಎಡಗಾಲಿಗೆ ಗುಂಡು ತಗುಲಿದೆ.
ಗಾಯಾಳುಗಳಾದ ಪೊಲೀಸ್‌ ಸಿಬ್ಬಂದಿ ದ್ಯಾಮಪ್ಪ ಮತ್ತು ಕಲ್ಕೆರೆ ಮಂಜನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.




Previous Post Next Post