ಸರ್ಕಾರಿ ಹಿ.ಪ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ
ತೀರ್ಥಹಳ್ಳಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಕೋಳಿಕಾಲು ಗುಡ್ಡದಲ್ಲಿರುವಂತಹ ಸರ್ಕಾರಿ ಉರ್ದು.ಹಿ.ಪ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹಳ ವಿಶಿಷ್ಟ ರೀತಿಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡ, ಮರದ ಮಹತ್ವ ಹಾಗೂ ಕಾಡು, ವನ್ಯಜೀವಿಗಳ ಅವಶ್ಯಕತೆ ಪರಿಸರದ ಸಂರಕ್ಷಣೆ ಬಗ್ಗೆ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಎಸ್ .ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕಿಯರು ಪೋಷಕರು ಗಿಡಗಳನ್ನು ನೆಡೆಯುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಹಿಂದೆ ಶಾಲಾ ಪ್ರಾರಂಭೋತ್ಸವವನ್ನು ಬಹಳ ಅದ್ದೂರಿಯಿಂದ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಗಣೇಶ್ ರವರು ಪುಟಾಣಿ ಮಕ್ಕಳೊಂದಿಗೆ ಶಾಲಾ ಉದ್ಘಾಟನೆ ಮಾಡಿ ಮಕ್ಕಳಿಗೆ ಕಿರೀಟವನ್ನು ತೊಡಿಸುವ ಮೂಲಕ ಶಾಲೆಗೆ ಮಕ್ಕಳನ್ನು ಸ್ವಾಗತಿಸಿದರು. ನಂತರ ಸಭಾ ಕಾರ್ಯಕ್ರಮ ಉದ್ದೇಶಿಸಿ ಬಿ.ಇ.ಓ ಗಣೇಶ್ ನವರು ಮಾತನಾಡಿ ಈ ಶಾಲೆಯು ಬಹಳ ಪ್ರಗತಿ ಹೊಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಚಾರ. ತಾಲೂಕಿನಲ್ಲಿ ಮೊದಲ ಸ್ಥಾನ ಹಾಗೂ ಮೂರನೇ ಸ್ಥಾನ ಅಭಿವೃದ್ಧಿಯಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ಈ ಶಾಲೆಯು ಪಡೆದುಕೊಂಡಿದೆ ಎಂದರೆ ತಪ್ಪಿಲ್ಲ ಎಂದರಲ್ಲದೆ ಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಾಲಾ ಸಿಬ್ಬಂದಿಗಳಿಗೆ ಪ್ರಶಂಸಿಸಿದರು.
ನಂತರ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರ್ವೇಜ್ ಅಹಮದ್ ರವರು ಮಾತನಾಡಿ ಬಿ.ಇ.ಒ ರವರ ಸಹಕಾರಕ್ಕೆ ಕೃತಜ್ಞತೆಗಳನ್ನು ಹೇಳುತ್ತಾ ಈ ಸಾಲಿನ ಎಸ್.ಎಸ್.ಎಲ್. ಪರೀಕ್ಷಾ ಫಲಿತಾಂಶದಲ್ಲಿ ತೀರ್ಥಹಳ್ಳಿಯು ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಳ್ಳುವಲ್ಲಿ ಬಿ.ಇ.ಒ ರವರ ಮಹತ್ತರ ಪಾತ್ರವಿದೆ ಅವರು ಕ್ಷೇತ್ರದ ಎಲ್ಲಾ ಶಾಲೆಗಳಿಗೂ ತಮ್ಮ ದ್ವಿಚಕ್ರ ವಾಹನದಲ್ಲಿ ಓಡಾಡಿ ರಾಜ್ಯಮಟ್ಟದಲ್ಲಿ ತೀರ್ಥಹಳ್ಳಿ ಹೆಸರು ಬರುವಂತೆ ಮಾಡಿದ್ದು
ಅವರ ಸಾಧನೆಗೆ ಅಭಿನಂದಿಸಿದರು. ಜೊತೆಗೆ ಈ ಶಾಲೆಯಲ್ಲಿ ಓದಿದಂತಹ ಸುಮಾರು ಆರು ಮಕ್ಕಳು 90 ಶೇಕಡಕ್ಕಿಂತ ಹೆಚ್ಚು ಅಂಕವನ್ನು ಪಡೆದುಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ನಂತರ ಪುಟಾಣಿ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆ ನಡೆಸಿ, ಸಿಹಿ ಹಾಗೂ ಉಡುಗೊರೆ ನೀಡಿ ಕಾರ್ಯಕ್ರಮವನ್ನು ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಸರ್ದಾರ್ ಅಸ್ರಾರ್, ಸಾಧಿಕ್, ಅರಫತ್, ತನ್ವೀರ್ ಅಹಮದ್, ತಸ್ನೀಮ್, ಸುಹಾನ, ನೂರ್ಜಾನ್, ರೇಷ್ಮಾ, ಸಭಾ, ಶಕೀರ, ಶಾಜೀಯ ಹಾಗೂ ಎಲ್.ಕೆ .ಜಿ, ಯು.ಕೆ ಜಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
Tags:
ತೀರ್ಥಹಳ್ಳಿ ಸುದ್ದಿ