ಸ್ವಯಂ ಪ್ರೇರಣಾ ಟ್ರಸ್ಟ್ ವತಿಯಿಂದ ಪ್ರೇರಣಾ ಮನೆ ಹಸ್ತಾಂತರ House Opening

ಸ್ವಯಂ ಪ್ರೇರಣಾ ಟ್ರಸ್ಟ್ ವತಿಯಿಂದ ಪ್ರೇರಣಾ ಮನೆ ಹಸ್ತಾಂತರ
ತೀರ್ಥಹಳ್ಳಿ : ಸ್ವಯಂ ಪ್ರೇರಣಾ ಟ್ರಸ್ಟ್  ಕಮ್ಮರಡಿ ವತಿಯಿಂದ ತಾಲೂಕಿನ  ನಂಟೂರಿನ ತಾರಿಬೈಲು  ಶೈಲಾ  ಗಣೇಶ್ ಇವರಿಗೆ ನೂತನ ಮನೆಯನ್ನು ಸ್ವಯಂ ಪ್ರೇರಣಾ ಟ್ರಸ್ಟ್ (ರಿ) ಕಮ್ಮರಡಿ ವತಿಯಿಂದ ನಿರ್ಮಿಸಿ ಕೊಡಲಾಯಿತು. ಸಂಪೂರ್ಣ ಶಿಥಿಲಾವಸ್ಥೆ ತಲುಪಿ, ಶೖಲಾ ರವರ ಮನೆ  ಮಳೆಗಾಲದಲ್ಲಿ ಮನೆ ಬಿದ್ದು, ಬೇರೆ ಮನೆಯಲ್ಲಿ ವಾಸವಾಗಿದ್ದು  ಬಡ ಕುಟುಂಬ ಎರಡು ಹೆಣ್ಣು ಮಕ್ಕಳು ಹಾಗೂ ತಾಯಿಯ ಕೋರಿಕೆಯ ಮೇರೆಗೆ ಮೂರು ತಿಂಗಳಲ್ಲಿ ಮನೆ ನಿರ್ಮಿಸಿಕೊಡಲಾಯಿತು. 

ಈ ಮನೆಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ್ ಆಶೀರ್ವದಿಸಿ ನೀಡಿದ ನಾಮಫಲಕವನ್ನು ಮಠದ ಪ್ರತಿನಿಧಿಗಳಾಗಿ ಆಗಮಿಸಿ  ತೇಜಶಂಕರ ಸೋಮಯಾಜಿಯವರು 
ಭಾನುವಾರ ಉದ್ಘಾಟನೆ ಮಾಡಿದರು. ಟ್ರಸ್ಟ್ ನ ಸಲಹಾ ಸಮಿತಿಯ ಗೌರವಾಧ್ಯಕ್ಷರಾದ  ಪ್ರಕಾಶ್ ರಾಮಚಂದ್ರಯ್ಯ ಅಟ್ಲಾಂಟಾ ಇವರು ಟೇಪ್ ಕತ್ತರಿಸುವ ಮೂಲಕ ಮನೆಗೆ ಮೊಲದ ಹೆಜ್ಜೆ ಇಟ್ಟರು.

ನಂತರ ಮನೆಯಲ್ಲಿ ದೀಪಬೆಳಗಿ, ಮನೆಯ ಸದಸ್ಯರಿಗೆ ದೀಪವನ್ನು  ಸುರೇಂದ್ರ ಎನ್ ಎಸ್ ಮುಖ್ಯೋಪಾಧ್ಯಾಯರು, ಶ್ರೀ ದುರ್ಗಾಪರಮೇಶ್ವರಿ ಪೌಢ ಶಾಲೆ ಭಂಡಿಗಡಿ ಇವರು ನೆರವೇರಿಸಿದರು.  ಮೋಹಿತ್ , ಪ್ರಾಧ್ಯಾಪಕರು, ಎನ್. ಐ.ಐ.ಟಿ ಸುರತ್ಕಲ್  ಮನೆ ಕೀ ಕುಟುಂಬದವರಿಗೆ  ಹಸ್ತಾಂತರ ಮಾಡಿದರು.

ಮಹಾತ್ಮ ಗಾಂಧೀಜಿ ಕಂಡ ಸ್ವರಾಜ್ಯ ಗ್ರಾಮದ ಮಾದರಿಯಲ್ಲಿ ಟ್ರಸ್ಟ್ ನ ಸದಸ್ಯರುಗಳು ಮನೆ ನಿರ್ಮಾಣ ಮಾಡಿ ಗೃಹಪ್ರವೇಶ ಕಾರ್ಯಕ್ರಮ  ನೆರವೇರಿಸಿರುವುದನ್ನು  ಪ್ರಕಾಶ್ ರಾಮಚಂದ್ರಯ್ಯ ಶ್ಲಾಘಿಸಿದರು. ಸಮಾಜದಲ್ಲಿ ದುರ್ಬಲವರ್ಗದವರಿಗೆ, ಅಶಕ್ತರಿಗೆ ಮಾನವೀಯ ನೆಲೆಯಲ್ಲಿ ನೆರವಾಗುವುದನ್ನು ನಾವು ಮಾಡುವುದು ಧರ್ಮದ ಕೆಲಸ ಎನ್ನುವುದನ್ನು  ತೇಜಶಂಕರ ಸೋಮಯಾಜಿರವರು ತಿಳಿಸಿ ಶುಭಹಾರೈಕೆಗಳನ್ನು ಸಲ್ಲಿಸಿದರು. ಸಮಾಜದಲ್ಲಿ ಇಂತಹ ಸತ್ಕಾರ್ಯಗಳು ಬಹುಕಾಲ ಉಳಿಯುತ್ತದೆ. ದುಡಿದ ಒಂದಂಶ ಸಮಾಜಕ್ಕೆ ವಿನಿಯೋಗ ಮಾಡುವುದು  ನಮ್ಮ ಆದ್ಯತೆಯಾಗಬೇಕು ಎಂದು  ಸುರೇಂದ್ರ  ರವರು ತಿಳಿಸಿದರು.

ಸಭೆಯಲ್ಲಿ  ಹೊನ್ನೇತಾಳು ಗ್ರಾಮ ಪಂಚಾಯತಿ
ಅಧ್ಯಕ್ಷರಾದ  ಕೊಟೆಗುಡ್ಡೆ ಸುರೇಂದ್ರ ಇವರು ಟ್ರಸ್ಟ್ ನ‌ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದರು.  ಬಿಳಿಗೆ ಮಂಜುನಾಥ, ರಾಘವೇಂದ್ರ ಕುಂದಾದ್ರಿ ಇವರು ನೂತನ ಮನೆಗೆ ಶುಭಹಾರೈಕೆಗಳನ್ನು ಸಲ್ಲಿಸಿದರು.

ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಗಿರೀಶ್ ಕಲ್ಕೋಡು ಇವರು ಮನೆಗೆ ಅಗತ್ಯ ಮೂಲಭೂತ ಪಾತ್ರೆ, ಹಾಸಿಗೆ ಸಮಾಗ್ರಿಗಳನ್ನು ವಿತರಿಸಿದರು. ಟ್ರಸ್ಟ್ ನ ಸಲಹಾ ಸಮಿತಿಯ ಅಧ್ಯಕ್ಷರಾದ  ಡಾ. ರವಿಶಂಕರ ಉಡುಪರವರು ಮಂದಿನ ಕಾರ್ಯಕ್ರಮಕ್ಕೆ ಮುಷ್ಠಿ ದೇಣಿಗೆ ನೀಡುವ ಮೂಲಕ ಟ್ರಸ್ಟ್ ನ ಸಮಾಜಮುಖಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ  ನಿತ್ಯಾನಂದ ಎ ಜಿ ರವರು ಟ್ರಸ್ಟ್ ನ ಈ ಪ್ರೇರಣಾ ಮನೆಗೆ ಸಹಕಾರವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು


Previous Post Next Post