ಕುಂದಾದ್ರಿ ವರ್ತೆಗದ್ದೆ ಬಳಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತ Rain

ಕುಂದಾದ್ರಿ ವರ್ತೆಗದ್ದೆ ಬಳಿ ಮರ ಬಿದ್ದು ರಸ್ತೆ ಸಂಪರ್ಕ ಕಡಿತ
ತೀರ್ಥಹಳ್ಳಿ : ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಬಾರಿ ಗಾಳಿ ಮಳೆಯಿಂದ ಆಗುಂಬೆಯ ಕುಂದಾದ್ರಿ ವರ್ತೆಗದ್ದೆ ಬಳಿ
ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಗುಡ್ಡೆಕೇರಿ ಹೊಸೆಗದ್ದೆ - ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆ ಮರ ಬಿದ್ದು ಕಡಿತಗೊಂಡಿದ್ದು ರಾತ್ರಿ ಬಾರಿ ಗಾಳಿ ಮಳೆಯಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈಗಾಗಲೇ ಸ್ಥಳೀಯರು ಮರ ಕಟಾವು ಮಾಡಿ ತೆರವುಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಹೊಸೆಗದ್ದೆ - ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು ದೊಡ್ಡ ವಾಹನ ಓಡಾಟ ನಿಲ್ಲಿಸಲಾಗಿದೆ. 

Previous Post Next Post