ಆರಿದ್ರಾ ಮಳೆಯ ಅಬ್ಬರ - ತೀರ್ಥಹಳ್ಳಿಯ ಕೆಲವು ಶಾಲೆಗಳಿಗೆ ರಜೆ ಘೋಷಣೆ..!
ತಾಲೂಕು ಆಡಳಿತ ಹಾಗೂ ಶಿಕ್ಷಣಾಧಿಕಾರಿಗಳ ಮೌನ..!?
ತೀರ್ಥಹಳ್ಳಿ: ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಂದು( ಜೂ. 25 ರ ಬುಧವಾರ ) ಶಾಲೆಗಳಿಗೆ ರಜೆ ನೀಡುವ ತೀರ್ಮಾನವನ್ನು ತಾಲೂಕು ಆಡಳಿತವಾಗಲಿ ಅಥವಾ ಶಿಕ್ಷಣಾಧಿಕಾರಿಗಳೇ ಆಗಲಿ ತೆಗೆದುಕೊಳ್ಳಲಿಲ್ಲ. ಇವರ ಆದೇಶಕ್ಕಾಗಿ ಕಾದು ಕುಳಿತ ಕೆಲವು ಶಾಲೆಗಳು ತಮಗೆ ತಾವೇ ರಜೆ ನೀಡಿದ್ದಾರೆ.
ಹೌದು ತೀರ್ಥಹಳ್ಳಿಯಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ತಾಲೂಕಿನ ಕೆಲವು ಶಾಲೆಗಳಿಗೆ ರಜೆ ನೀಡಲಾಗಿದೆ. ವಾಗ್ದೇವಿ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಹೊನ್ನೇತಾಳು ಸರ್ಕಾರಿ ಶಾಲೆ, ಬಸವಾನಿ ಸರ್ಕಾರಿ ಶಾಲೆ ಹಾಗೂ ಮೇಗರವಳ್ಳಿ ಸರ್ಕಾರಿ ಶಾಲೆಗೆ ರಜೆ ನೀಡಿರುವುದಾಗಿ ತಿಳಿದುಬಂದಿದೆ. ಮಕ್ಕಳ ಹಿತೈದೃಷ್ಟಿ ಯಿಂದ ಮುಂಜಾಗೃತಾ ಕ್ರಮವಾಗಿ ರಜೆಯನ್ನು ನೀಡಲಾಗಿದೆ.
ಬಾರಿ ಮಳೆ ಇದ್ದರೂ ಸಹ ತಾಲೂಕು ಆಡಳಿತ ಹಾಗೂ ಶಿಕ್ಷಣಾಧಿಕಾರಿಗಳು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಮಕ್ಕಳ ಬಗ್ಗೆ ಸ್ವಲ್ಪವಾದರೂ ಕರುಣೆ ಇರಬೇಕು, ಹಳ್ಳ ಕೊಳ್ಳಗಳನ್ನು ದಾಟಿ ಕೆಲವು ಕಡೆ ವಿದ್ಯಾರ್ಥಿಗಳು ಬರುತ್ತಾರೆ.
ಈ ಸಂದರ್ಭದಲ್ಲಿ ರಜೆ ನೀಡಿ ಮುಂದೆ ಯಾವಾಗಾದರೂ ತರಗತಿ ಮಾಡಬಹುದು, ಇತ್ತ ಬಿ ಇ ಓ ಸಹ ರಜೆ ನೀಡಲ್ಲ ಅತ್ತ ತಾಲೂಕು ಆಡಳಿತ ಸಹ ಸುಮ್ಮನಿರುತ್ತೆ ಹೀಗೆ ಆದರೆ ಇವರ ಬೇಜವಾಬ್ದಾರಿ ಎತ್ತಿ ಕಾಣಿಸುತ್ತದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Tags:
ಮಳೆ