ಆರಿದ್ರಾ ಮಳೆಯ ಅಬ್ಬರ - ಶಾಲಾ ವಿದ್ಯಾರ್ಥಿಗಳ ಪರದಾಟ..! Rain Efect

ಆರಿದ್ರಾ ಮಳೆಯ ಅಬ್ಬರ - ಶಾಲಾ ವಿದ್ಯಾರ್ಥಿಗಳ ಪರದಾಟ..!

ತೀರ್ಥಹಳ್ಳಿ : ಮಲೆನಾಡಿನಲ್ಲಿ ಮತ್ತೊಮ್ಮೆ ಮಳೆ ಚುರುಕುಗೊಂಡಿದೆ. ಆರಿದ್ರಾ ಮಳೆಯ ಅಬ್ಬರ ಹೆಚ್ಚಾಗಿದ್ದು ಕಳೆದ 12 ಗಂಟೆಗಳಿಂದ ಎಡಬಿಡದೆ ಸುರಿಯುತ್ತಿದೆ. ಅದರಲ್ಲೂ ಮಳೆಯ ಜೊತೆಗೆ ಶೀತ ಗಾಳಿ ಬೀಸುತ್ತಿದ್ದು 
ವಾತಾವರಣ ಸಂಪೂರ್ಣ ಶೀತಮಯವಾಗಿದೆ. ಮಳೆಯ ಅಬ್ಬರಕ್ಕೆ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸಿದರು.

ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಧರೆಗೆ ಇಳಿಯುವ ವರುಣ ಮಕ್ಕಳನ್ನು ಸಂಪೂರ್ಣ ಚಂಡಿ ಮಾಡಿ ಹೋಗುತ್ತಾನೆ. ಇಂದು ಬೆಳಗ್ಗೆ ಯಿಂದ ಒಂದೇ ಸಮನೆ
ಮಳೆ ಸುರಿಯುತ್ತಿದ್ದು ಶಾಲಾ ಮಕ್ಕಳು ಸಂಪೂರ್ಣ ಒದ್ದೆಯಾಗಿದ್ದಾರೆ. ಈ ಮಳೆ ನಾಳೆಯೂ ಸಹ ಮುಂದುವರೆಯುವ ಸಾಧ್ಯತೆ ಹೆಚ್ಚಿದ್ದು ಈ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಹೆಚ್ಚಿನ ಗಮನ ನೀಡಬೇಕಿದೆ.

ನಾಳೆ ಎಷ್ಟರ ಮಟ್ಟಿಗೆ ಮಳೆ ಬೀಳಬಹುದು ಎಂಬುದನ್ನು ತಿಳಿದು ಅವಶ್ಯಕತೆ ಇದ್ದಲ್ಲಿ ಶಾಲಾ ಕಾಲೇಜಿಗೆ ರಜೆ ನೀಡುವುದು ಸೂಕ್ತವಾಗಿದೆ.  ಆರಿದ್ರಾ ಮಳೆ ತಾಲೂಕಿನಾದ್ಯಂತ ಅಬ್ಬರಿಸುತ್ತಿದ್ದು ಎಸ್ ಡಿ ಎಂ ಸಿ ರಜೆ ನೀಡಲಿ ಎಂದು ತಮ್ಮನ್ನು ತಾವು ತಪ್ಪಿಸಿಕೊಳ್ಳುವ ಬದಲು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಅವಶ್ಯಕತೆ ಇದ್ದರೆ ರಜೆ ನೀಡಬೇಕು ಎಂದು ಪೋಷಕರು ತಿಳಿಸಿದ್ದಾರೆ.




Previous Post Next Post