ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ..!
ತೀರ್ಥಹಳ್ಳಿ : ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆಗೆ ವಾಲಿರುವ ಮರ ಹಾಗೂ ಅದರ ಕೊಂಬೆಗಳನ್ನು ಆದಷ್ಟು ಬೇಗ ತೆರವು ಮಾಡಬೇಕು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಹೋಟೆಲ್ ಮಾಲೀಕರು ಹಾಗೂ ಕಲ್ಯಾಣ ಮಂಟಪದ ಮ್ಯಾನೇಜರ್ ಗಳ ಜೊತೆಗೆ ಚರ್ಚೆ ನಡೆಸಲಾಯಿತು.
ಮಳೆಗಾಲವಾದ್ದರಿಂದ ರಸ್ತೆಯ ಅಕ್ಕಪಕ್ಕ ಇರುವ ಮರದ ಬಗ್ಗೆ ಎಚ್ಚರಿಕೆ ವಹಿಸಿ, ರಂಬೆ ಕೊಂಬೆ ಬೀಳುವ ಪರಿಸ್ಥಿತಿಯಲ್ಲಿದ್ದರೆ ತಕ್ಷಣವೇ ಅದನ್ನು ಕಡಿಯಬೇಕು. ಸಾರ್ವಜನಿಕರಿಗೆ ಅದರಿಂದ ತೊಂದರೆ ಆಗಬಾರದು. ಇನ್ನು ಮರಕ್ಕೆ ಯಾವುದಾದರು ಜಾಹಿರಾತು ಫಲಕ ಹಾಕಿದ್ದರೆ ಅದನ್ನು ತೆರವು ಮಾಡಲು ಮನವಿ ಮಾಡಿದರು.
ಇನ್ನು ಹೋಟೆಲ್ ಹಾಗೂ ಕಲ್ಯಾಣ ಮಂಟಪದವರ ಜೊತೆಗೆ ಮಾತನಾಡಿ ಮಳೆಗಾಲ ಆದ ಕಾರಣ ಬಿಸಿ ನೀರು ಕೊಡಬೇಕು, ಹೊರ ಭಾಗ ಅಷ್ಟೇ ಅಲ್ಲದೆ ಹೋಟೆಲ್ ಅಡಿಗೆ ಮನೆಯನ್ನು ಶುಚಿಯಾಗಿ ಇಡಬೇಕು. ಪ್ರತಿ ದಿನ ಕಸದ ವಾಹನ ಬಂದಾಗ ವಾಹನಕ್ಕೆ ಕಸ ಹಾಕಬೇಕು, ಯಾವುದೇ ರೀತಿ ಬಣ್ಣ ಬರುವ ಪದಾರ್ಥಗಳನ್ನು ಬಳಸಬಾರದು ಎಂದರು.
ಕಲ್ಯಾಣ ಮಂಟಪದ ಎದುರು ರಸ್ತೆಯಲ್ಲೇ ವಾಹನಗಳು ನಿಲ್ಲುತ್ತವೆ ಹಾಗಾಗಿ ಅಲ್ಲಿ ಯಾರಾದರೂ ವಾಚ್ ಮ್ಯಾನ್ ನಿಲ್ಲಿಸಬೇಕು. ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆ ಆಗಬಾರದು. ಮದುವೆ ಹಾಗೂ ಇತರ ಸಮಾರಂಭ ನಡೆಯುವಾಗ ಶುಚಿತ್ವ ಕಾಪಾಡಬೇಕು ಎಂದರು.
Tags:
ಪಟ್ಟಣ ಪಂಚಾಯತ್