ರಸ್ತೆಗೆ ವಾಲಿರುವ ಮರ - ತೆರವುಗೊಳಿಸಲು ಸಾರ್ವಜನಿರ ಆಗ್ರಹ Agumbe

ರಸ್ತೆಗೆ ವಾಲಿರುವ ಮರ - ತೆರವುಗೊಳಿಸಲು ಸಾರ್ವಜನಿರ ಆಗ್ರಹ

ತೀರ್ಥಹಳ್ಳಿ : ಆಗುಂಬೆ  ಮಲ್ಲಂದೂರು ಹೋಗುವ ರಸ್ತೆಗೆ ಒಣಗಿದ ಮರದ ರೆಂಬೆಗಳು ರಸ್ತೆಗೆ ವಾಲಿ ಪ್ರಯಾಣಿಕರ ಜೀವ ತೆಗೆಯಲು ಕಾದು ಕುತಂತಿದೆ.ಈ ಬಗ್ಗೆ ಅರಣ್ಯ ಇಲಾಖೆ ಕೂಡ ಮುತುವರ್ಜಿ ವಹಿಸಿ ರಸ್ತೆ ಸಮೀಪದಲ್ಲಿ ಅಪಾಯಕಾರಿಯಾಗಿ ಮರಗಳನ್ನು ಹಾಗೂ ಒಣಗಿ ಮರಕ್ಕೆ ಜೋತು ಬಿದ್ದ ಮರದ ತುಂಡುಗಳನ್ನ ತೆರೆವುಗೊಳಿಸಿ  ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾವಾಗಿದೆ.


ಆಗುಂಬೆಯಿಂದ ಎರಡು ಕಿಮೀ ದೂರದಲ್ಲಿ ಮರ ರಸ್ತೆಗೆ ವಾಲಿ ನಿಂತಿದೆ. ಆಗುಂಬೆಗೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಯಾರ ವಾಹನ ಅಥವಾ ಯಾರಿಗಾದರೂ ಅನುಹುತ ಆಗುವ ಮೊದಲು ಮರ ತೆರವು ಮಾಡಬೇಕು. ಆಗುಂಬೆ ಪ್ರವಾಸಿ ತಾಣ ಸಹ ಆಗಿರುವುದರಿಂದ ಅಲ್ಲಿನ ಸುತ್ತ ಮುತ್ತಲಿನ ಜಾಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚು. ಈ ಎಲ್ಲಾ ಕಾರಣದಿಂದ ತಕ್ಷಣವೇ ಅಧಿಕಾರಿಗಳು ರಸ್ತೆಗೆ ವಾಲಿರುವ ಮರವನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಹೇಳಿದ್ದಾರೆ.
Previous Post Next Post