ತೀರ್ಥಹಳ್ಳಿ ಸಮೀಪದಲ್ಲೆ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು
ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ತುಪ್ಪದಮನೆಯ ಮುಖ್ಯ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರಿಗೆ ಸಂಜೆ 6 ರಿಂದ 7 ರ ಸಮಯದಲ್ಲಿ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ತುಪ್ಪದಮನೆ ದೇವಸ್ಥಾನದ ಮುಂಭಾಗದ ಹೊದಲ- ಗುಡ್ಡೆಕೊಪ್ಪ ಮುಖ್ಯ ರಸ್ತೆ ಹಾಗೂ ಎಡಗುಡ್ಡೆ ತಿರುವಿನ ವೃತ್ತದಲ್ಲಿ ಚಿರತೆಯನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಈಗಾಗಲೇ ಈ ಚಿರತೆಯು ಈ ಪ್ರದೇಶದ ಕೊಪ್ಪಲು,ಗೊರಕೋಡು ಹಾಗೂ ಎಡಗುಡ್ಡೆಯಲ್ಲಿನ ಮನೆಯಲ್ಲಿ ಸಾಕಿದ ನಾಯಿಗಳನ್ನು ಹೊತ್ತಯ್ದ ಬಗ್ಗೆ ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ. ಅರಣ್ಯ ಇಲಾಖೆಯವರು ಈ ಸಂಬಂಧ ಚಿರತೆ ಸೆರೆಹಿಡಿಯಲು ಕಾರ್ಯಚರಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Tags:
ಚಿರತೆ